ನಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕದಲ್ಲಿ ಈಗ ಎಲ್ಲಿ ನೋಡಿದರೂ ಲೋಕಸಭಾ ಚುನಾವಣೆಯ ಫಲಿತಾಂಶದ ಮಾತು. ಮೈತ್ರಿಯನ್ನು ರಚಿಸಿಕೊಂಡಿರುವ ಸರ್ಕಾರಗಳಿಗೆ ಪ್ರತಿಷ್ಠೆಯ ಕಣವಾಗಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಪಕ್ಷಕ್ಕೆ ತಮ್ಮ ತಾಕತ್ತು ಏನೆಂಬುದನ್ನು ತೋರಿಸಲು ಒಂದು ಒಳ್ಳೆಯ ಅವಕಾಶ.
ಇಂತಹ ಸಮಯದಲ್ಲಿ ಮೈತ್ರಿ ಸರ್ಕಾರಕ್ಕೆ ಎದುರಾಗಿರುವ ಸಂಕಟವನ್ನು ನೋಡಿದರೆ ಬಿಜೆಪಿ ಬೆಂಬಲಿಗರಲ್ಲಿ ಬಾರಿ ಹರ್ಷೋದ್ಗಾರ ಮೂಡುತ್ತಿದೆ ಇಷ್ಟೇ ಅಲ್ಲದೆ ಬಿ.ಎಸ್.ವೈ ರವರ ಪುತ್ರರಾದ ರಾಘವೇಂದ್ರ ರವರು ಲೋಕಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ವರ್ಚಸ್ಸು ಏನೆಂಬುದು ಎಲ್ಲರಿಗೂ ತಿಳಿದಿದೆ. ಚುನಾವಣೆ ಘೋಷಿತವಾದ ತಕ್ಷಣವೇ ತಮ್ಮ ಮಗ ಅಭ್ಯರ್ಥಿ ಎಂದು ತಿಳಿಸಿ, ಮಗನನ್ನು ಬೆಂಬಲಿಸಬೇಕು ಎಂದು ಶಿವಮೊಗ್ಗ ಜನತೆಯಲ್ಲಿ ಯಡಿಯೂರಪ್ಪನವರು ಮನವಿ ಮಾಡಿಕೊಂಡಿದ್ದರು.
ಕಳೆದ ಕೆಲ ತಿಂಗಳುಗಳ ಹಿಂದೆ ನಡೆದಿದ್ದ ಉಪಚುನಾವಣೆಯಲ್ಲೂ ಬಿ ವೈ ರಾಘವೇಂದ್ರ ಅವರು ಭರ್ಜರಿ ಗೆಲುವು ಸಾಧಿಸಿದ್ದರೂ ಈ ಬಾರಿಯಾ ಚುನಾವಣೆಯಲ್ಲು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
Comments
Post a Comment