ಬೀದರ್ [ಸೆ.10]: ಕಾಂಗ್ರೆಸ್ ಶಾಸಕರು ಬಿಜೆಪಿಯತ್ತ ಮುಖಮಾಡುತ್ತಿರುವ ಈ ದಿನಗಳಲ್ಲಿ ಹುಮನಾಬಾದ್‌ನಲ್ಲಿ ಇಂಥದ್ದೊಂದು ಆತಂಕ ಕಾಂಗ್ರೆಸ್ ಕಾರ್ಯಕರ್ತರಿಗಿಂತ ಬಿಜೆಪಿಯ ಕಾರ್ಯಕರ್ತರು ಹಾಗೂ ಮುಖಂಡರನ್ನು ಚಿಂತೆಗೀಡು ಮಾಡಿದ್ದು, ಕೈ ಶಾಸಕರನ್ನು ಸೆಳೆಯದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರಲ್ಲಿ ಅಂಗಲಾಚಿದ್ದಾರೆ.
ಹುಮನಾಬಾದ್ ವಿದಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರನ್ನ ಬಿಜೆಪಿ ಪಕ್ಷದ ಸೇರ್ಪಡೆಗೆ ಅನುವು ಮಾಡಿಕೊಡಬಾರದು, ನಾಲ್ಕು ದಶಕಗಳಿಂದ ಕಟ್ಟಿಬೆಳೆಸಿದ ಕಾರ್ಯಕರ್ತರು ಹತಾಶರಾಗುತ್ತಾರೆ ಎಂದು ಪಕ್ಷದ ಮುಖಂಡರು. ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಸೋಮವಾರ ಕಲಬುರಗಿಯಿಂದ ಬೀದರ್‌ಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯ ಪಟ್ಟಣದಲ್ಲಿ ಭೇಟಿಯಾಗಿ ಮನವಿಸಿದ್ದಾರೆ.
ಮಾಜಿ ಶಾಸಕ ಸುಭಾಷ ಕಲ್ಲೂರ್, ಪಕ್ಷದ ತಾಲೂಕಾಧ್ಯಕ್ಷ ವಿಶ್ವನಾಥ ಪಾಟೀಲ್ ಮಾಡಗೂಳ, ಪದ್ಮಾಕರ್ ಪಾಟೀಲ್, ಸೋಮನಾಥ ಪಾಟೀಲ್ ಮತ್ತಿತರರ ನೇತೃತ್ವದಲ್ಲಿ ಮನವಿ ಸಲ್ಲಿಸಿ ಕಾರ್ಯಕರ್ತರ ಭಾವನೆಗಳಿಗೆ ನೋವಾಗದಂತೆ ಸ್ಥಳೀಯ ಕಾಂಗ್ರೆಸ್ ಶಾಸಕರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದೆಂದು ಮನವಿ ಸಲ್ಲಿಸಿ ಒತ್ತಾಯಿಸಿದರು.
Comments
Post a Comment