ಈದೀಗ ಬಂದ ಸುದ್ದಿ: ಡಿಕೆಶಿಗೆ ಕಾಂಗ್ರೆಸ್ ನಿಂದಲೇ ಶಾಕ್ !! ಕೊನೆಗೂ 'ಮುಲ್ಲಾಯಿತು ಈ ಒಕ್ಕಲಿಗ ಸಮುದಾಯ'ದ ಪ್ರತಿಭಟನೆ!!

ತುಮಕೂರು: ಮಾಜಿ ಸಚಿವ ಡಿ. ಕೆ. ಶಿವಕುಮಾರ್
ಪರ ಪ್ರತಿಭಟನೆಗಳನ್ನು ನಡೆಸುವ ಮೂಲಕ ವಿಷಯಾಂತರ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕಾಗಲಿ, ರಾಜ್ಯ ಸರ್ಕಾರಕ್ಕಾಗಲಿ ಈ ಪ್ರಕರಣಕ್ಕೆ ಸಂಬಂಧವಿಲ್ಲ, ಇಡಿ ತನ್ನ ಕೆಲಸ ತಾನು ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಡಿಕೆಶಿ ಪುತ್ರಿ ಐಶ್ವರ್ಯ ಮೇಲೆ ‘ಇಡಿ’ ಕಣ್ಣು ಬಿದ್ದಿದ್ದೇಕೆ?: ಟ್ರಸ್ಟ್ ಹೆಸರಲ್ಲಿ ನಡೆದ ವ್ಯವಹಾರವೇನು?

ಕಾಂಗ್ರೆಸ್‌ನವರು ಬಂದ್‌ಗೆ ಕರೆ ಕೊಡೋದು, ಜಾತಿಗಳ ನಡುವೆ‌‌ ಸಂಘರ್ಷ ತರೋದು ಮಾಡ್ತಿದ್ದಾರೆ. ಇದು ಒಳ್ಳೆಯದಲ್ಲ. ಕಾಂಗ್ರೆಸ್‌ನವರು ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪನವರ ಮೇಲೆ ಕೇಸ್ ಹಾಕಿದಾಗ ವೀರಶೈವರು, ಮಠಾಧೀಶರು ಪ್ರತಿಭಟನೆ ಮಾಡಿರಲಿಲ್ಲ ಎಂದು ರೇಣುಕಾಚಾರ್ಯ ಸಮರ್ಥಿಸಿಕೊಂಡಿದ್ದಾರೆ. ಮಠಾಧೀಶರ ಬಗ್ಗೆ ನಮಗೆ ಗೌರವ ಇದೆ. ಆದರೆ, ಕಾಂಗ್ರೆಸ್‌ನವರು ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಡಿಕೆಶಿ ಬಗ್ಗೆ ಪ್ರೀತಿ ಇದ್ದರೆ ಕಾನೂನು ಸಮರ ಮಾಡಲಿ, ಡಿಕೆಶಿ ಪರ ನಿಲ್ಲಲಿ ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಇಡಿ ರೆಡಾರ್‌ನಲ್ಲಿ ಡಿಕೆಶಿ ಪುತ್ರಿ!: ಐಶ್ವರ್ಯಗೆ ಕಾದಿದೆ ‘ಕೋಟಿ’ ಕಂಟಕ

ಸಾರ್ವಜನಿಕವಾಗಿ ತೊಂದರೆ ಕೊಡುವ ಕೆಲಸವನ್ನು ಮಾಡಬಾರದು ಎಂದು ಒತ್ತಾಯಿಸಿರುವ ರೇಣುಕಾಚಾರ್ಯ, ಡಿಕೆಶಿ ಹೊರಗಡೆ ಬರೋದು ಕಾಂಗ್ರೆಸ್‌ನವರಿಗೇ ಇಷ್ಟ ಇಲ್ಲ ಅನ್ನಿಸುತ್ತದೆ. ಹಾಗಾಗಿ ಕೋರ್ಟ್ ವಿರುದ್ದ ಹೋರಾಟ ಮಾಡುತ್ತಿದ್ದಾರೆ ಎಂದು ತಿವಿದಿದ್ದಾರೆ. ಡಿ.ಕೆ. ಶಿವಕುಮಾರ್ ಕಾಂಗ್ರೆಸ್‌ನ ಪ್ರಭಾವಿ ಮುಖಂಡ. ಆದರೆ ಅವರು ಹೊರಗಡೆ ಬಂದರೆ ಎಲ್ಲಿ ಪ್ರತಿಪಕ್ಷ ನಾಯಕ ಆಗುತ್ತಾರೋ, ಕೆಪಿಸಿಸಿ ಅಧ್ಯಕ್ಷರಾಗುತ್ತಾರೋ ಎಂಬ ಭಯ ಕಾಂಗ್ರೆಸ್‌ನವರಿಗೆ ಇದೆ ಎಂದು ಅಭಿಪ್ರಾಯಪಟ್ಟ ರೇಣುಕಾಚಾರ್ಯ, ಇದೇ ಕಾರಣಕ್ಕೆ ಡಿಕೆಶಿ ಶಾಶ್ವತವಾಗಿ ಒಳಗಡೆ ಇರುವಂತೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡರು ವಾಮಮಾರ್ಗದ ಮೂಲಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತುಮಕೂರು: ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಪರ ಪ್ರತಿಭಟನೆಗಳನ್ನು ನಡೆಸುವ ಮೂಲಕ ವಿಷಯಾಂತರ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕಾಗಲಿ, ರಾಜ್ಯ ಸರ್ಕಾರಕ್ಕಾಗಲಿ ಈ ಪ್ರಕರಣಕ್ಕೆ ಸಂಬಂಧವಿಲ್ಲ, ಇಡಿ ತನ್ನ ಕೆಲಸ ತಾನು ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Comments