ಈಗ ಬಂದ ಸುದ್ದಿ: ಬೈ ಎಲೆಕ್ಷನ್ ಹಿನ್ನೆಲೆ ಕಾಂಗ್ರೆಸ್ ನಾಯಕರ ಸಭೆ! ಆ ಒಬ್ಬ 'ಅನರ್ಹ ನಾಯಕನ ಎದುರು ಗೆಲುವು ಸಾಧ್ಯವಿಲ್ಲ' ಎಂದ ಕಾಂಗ್ರೆಸ್ ನ ನಾಯಕ?..

17 ಅನರ್ಹ ಶಾಸಕರ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಹಿನ್ನೆಲೆ, ಹೆಚ್ಚಿನ ಸ್ಥಾನಗಳನ್ನ ಗೆಲ್ಲಲು ರಾಜ್ಯ ಕಾಂಗ್ರೆಸ್ ತಯಾರಿ ನಡೆಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸ್ಥಳೀಯ ಮುಖಂಡರ ಜೊತೆ ಹಿರಿಯ ನಾಯಕರ ಸರಣಿ ಸಭೆ ನಡೆಯುತ್ತಿದ್ದು, ಸದ್ಯ ಚಿಕ್ಕಬಳ್ಳಾಪುರ ಕಾಂಗ್ರೆಸ್ ಮುಖಂಡರ ಸಭೆ ಆರಂಭವಾಗಿದೆ.

ಡಾ.ಸುಧಾಕರ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಪರ್ಯಾಯ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆಯುತ್ತಿದ್ದು, ಮಾಜಿ ಸಚಿವ ಶಿವಶಂಕರ ರೆಡ್ಡಿ, ಶಾಸಕ ವಿ. ಮುನಿಯಪ್ಪ, ಜಿಲ್ಲಾಧ್ಯಕ್ಷ ಕೇಶವ ರೆಡ್ಡಿ ಸೇರಿ ಸ್ಥಳೀಯ ಮುಖಂಡರು ಭಾಗಿಯಾಗಿದ್ದಾರೆ. ಇನ್ನು ಸಭೆಗೆ ಆಹ್ವಾನ ನೀಡಿದ್ದರೂ ಡಾ. ಸುಧಾಕರ್ ಜೊತೆ ಗುರುತಿಸಿಕೊಂಡಿರುವ ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಗೈರಾಗಿದ್ದಾರೆ.

ಕಾರ್ಯಕ್ರಮದ ನಿಮಿತ್ತ ವೀರಪ್ಪ ಮೊಯ್ಲಿ ಕೂಡ ಗೈರಾಗಿದ್ದಾರೆ.

Comments