ಈದೀಗ ಬಂದ ಸುದ್ದಿ: ಕಾಂಗ್ರೆಸ್ ನ ಬಲಿಷ್ಠ ನಾಯಕ ಬಿಜೆಪಿಗೆ ಸೇರ್ಪಡೆ! 'ಶಿವಾಜಿ ವಂಶಸ್ಥನಾದ ಬಲಿಷ್ಠ ' ನಾಯಕ!!

ಮುಂಬಯಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವಕ್ಕೆ ದೊಡ್ಡ ಮಟ್ಟದ ಚಾಲನೆ ಸಿಕ್ಕಿದೆ. ಇತ್ತೀಚಿನ ಪ್ರಮುಖ ಬೆಳವಣಿಗೆಯಲ್ಲಿ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ)ದ ಸತರಾ ಭಾಗದ ಪ್ರಭಾವಿ ನಾಯಕ, ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥ ಉದಯನ್‌ರಾಜೇ ಭೋಸಲೆ ಬಿಜೆಪಿ ಸೇರಲಿದ್ದಾರೆ.

ಭೋಸಲೆ ಶನಿವಾರ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಕಮಲ ಹಿಡಿಯಲಿದ್ದಾರೆ. ಮುಂಬಯಿಯಿಂದ ದೆಹಲಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಜೊತೆ ಪ್ರಯಾಣ ಬೆಳೆಸಲಿರುವ ಅವರನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ.

ಇತ್ತೀಚೆಗೆ ಹಲವಾರು ಎನ್‌ಸಿಪಿ ಮುಖಂಡರು, ಶಾಸಕರು ಬಿಜೆಪಿಯತ್ತ ವಲಸೆ ಹೋಗಿದ್ದಾರೆ. ಆದರೆ ಎನ್‌ಸಿಪಿಯ ಸಂಸದರೊಬ್ಬರು ಬಿಜೆಪಿ ಸೇರುತ್ತಿರುವುದು ಇದೇ ಮೊದಲು.

ಗುರುವಾರವಷ್ಟೇ ಉದ್ಧವ್‌ ಠಾಕ್ರೆ ಸಮ್ಮುಖದಲ್ಲಿ ಎನ್‌ಸಿಪಿ ಗಂಗಾನಗರ ಶಾಸಕ ಭಾಸ್ಕರ್‌ ಜಾಧವ್‌ ಶಿವಸೇನೆ ಸೇರಿದ್ದರು. ಇಂದು ಮತ್ತೋರ್ವ ನಾಯಕ, ಗುಹಾಗರ್‌ ಶಾಸಕ ಭಾಸ್ಕರ್‌ ಜಾಧವ್‌ ಶಿವಸೇನೆಗೆ ಬಂದಿದ್ದಾರೆ. ಇದೀಗ ಇನ್ನೋರ್ವ ಎನ್‌ಸಿಪಿಯ ಪ್ರಭಾವಿ ನಾಯಕ ರಾಮ್‌ರಾಜೆ ನಾಯಕ್‌ ನಿಂಬಾಳ್ಕರ್‌ ಪಕ್ಷ ಬಿಡುವ ಸಿದ್ಧತೆಯಲ್ಲಿದ್ದಾರೆ .

ಈ ಎಲ್ಲಾ ಬೆಳವಣಿಗೆ ನಡುವೆ ಭೋಸಲೆ ಪಕ್ಷ ಬಿಡುತ್ತಿರುವುದು ಶರದ್‌ ಪವಾರ್‌ ಬಳಗವನ್ನು ಚಿಂತೆಗೀಡು ಮಾಡಿದೆ. ಭೋಸಲೆ ಅತ್ಯಂತ ಪ್ರಭಾವಿ ನಾಯಕರಾಗಿದ್ದು, ಅವರೆಂಥಾ ಪ್ರಭಾವಿ ಎಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಯ ನಡುವೆಯೂ 1.90 ಲಕ್ಷ ಮತಗಳ ಅಂತರದಿಂದ ಅವರು ಜಯ ಸಾಧಿಸಿದ್ದರು. 2014ರಲ್ಲಂತೂ 3.60 ಲಕ್ಷ ಮತಗಳ ಅಂತರದ ಗೆಲುವು ಅವರದಾಗಿತ್ತು.
ಇಂಥಹ ನಾಯಕ ಭೋಸಲೆ ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷ ತೊರೆದಿರುವುದು ಎನ್‌ಸಿಪಿಗಾದ ಭಾರಿ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Comments