ಉಪಚುನಾವಣೆಗಾಗಿ ನಾವು ಮೊದಲಿನಿಂದಲೂ ಸಿದ್ದತೆ ಮಾಡಿಕೊಂಡಿದ್ದೇವೆ. ಯಾವಾಗ ಚುನಾವಣೆ ಬಂದರೂ ಎದುರಿಸಲು ಸಿದ್ದ ಎಂದು ಅನರ್ಹ ಶಾಸಕ ಶ್ರೀಮಂತ್ ಪಾಟೀಲ್ ಹೇಳಿದ್ದಾರೆ.
ಸ್ಪೀಕರ್ ಆದೇಶದಿಂದಾಗಿ ಅನರ್ಹಗೊಂಡಿರೋ ಶಾಸಕರು ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಹೇಳಿಕೆ ನೀಡಿದ್ದು, ಕಳೆದ ಅಧಿವೇಶನದಲ್ಲಿ ನಾನು ಸಂಪೂರ್ಣ ಹಾಜರಿದ್ದೆ. ಸದ್ಯ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೇಳಿ ಸಿದ್ಧತೆ ಮಾಡಿಕೊಂಡಿದ್ದೇವು ಎಂದು ತಿಳಿಸಿದ್ದಾರೆ.
ಅನಾರೋಗ್ಯ ಕಾರಣದಿಂದಾಗಿ ಮುಂಬಯಿ ಆಸ್ಪತ್ರೆಗೆ ದಾಖಲಾಗಿದ್ದೆ. ಸ್ಪೀಕರ್ ಗೆ ನಾನು ಎಲ್ಲ ದಾಖಲೆ ಕಳಿಸಿ ಗೈರು ಹಾಜರಿಗೆ ಅನುಮತಿ ಕೋರಿದ್ದೆ. ಆದರೆ ನನ್ನನ್ನು ಅನರ್ಹ ಮಾಡಿದ್ದರು ಎಂದರು.
ಆದರೆ ಸುಪ್ರೀಂ ಕೋರ್ಟ್ ಸಂಪೂರ್ಣ ಚುನಾವಣೆಗೆ ತಡೆ ನೀಡಿದೆ. ಮುಂಬರುವ ದಿನಗಳಲ್ಲಿ ನನಗೆ ನ್ಯಾಯ ಸಿಗುವ ನಿರೀಕ್ಷೆ ಇದೆ ಅಂತ ಶ್ರೀಮಂತ ಪಾಟೀಲ್ ಹೇಳಿಕೊಂಡಿದ್ದಾರೆ.
Comments
Post a Comment