ಈದೀಗ ಬಂದ ಸುದ್ದಿ: ಡಿ.ಕೆ.ಶಿವಕುಮಾರ್ ಆಪ್ತನಿಗೆ `ED ' ಶಾಕ್! ಆಪ್ತ  ಬೆರೆಯಾರು ಅಲ್ಲ .. ಕಾಂಗ್ರೆಸ್ ನ ಪ್ರಮುಖ ನಾಯಕನಾ....

ನವದೆಹಲಿ : ಈಗಾಗಲೇ ಇಡಿ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ದೆಹಲಿಯಲ್ಲಿರುವ ಡಿಕೆಶಿ ಆಪ್ತನ ಮನೆ ಮೇಲೆ ಇಡಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವುದಾಗಿ ಹೇಳಲಾಗುತ್ತಿದೆ. ಅಲ್ಲದೆ, ಇವರ ಮೇಲೆ ಇಡಿ ಅಧಿಕಾರಿಗಳು ಹಲವು ದಿನಗಳಿಂದ ನಿಗಾ ಇರಿಸಿದ್ದರು ಎನ್ನಲಾಗಿದೆ.

ಇಡಿ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ಪಡೆದಿರುವ ಇಡಿ ಅಧಿಕಾರಿಗಳು 7 ನೇ ದಿನವಾದ ಮಂಗಳವಾರ ಕೂಡ ವಿಚಾರಣೆಗೆ ಒಳಪಡಿಸಲಿದ್ದಾರೆ.

Comments