ಈದೀಗ ಬಂದ ಸುದ್ದಿ: ಡಿಕೆಶಿಗೆ ಮತ್ತೆ ಶಾಕ್!! ಡಿಕೆಶಿಯ ಕುಟುಂಬದ 'ಮತ್ತೊಂದು ಸದಸ್ಯೆಗೆ ಬಂತು ED ಅಧಿಕರಿಯಿಂದ ಸಮನ್ಸ್'!!

ನವದೆಹಲಿ :ಇಂದು ಡಿ.ಕೆ ಶಿವಕುಮಾರ್‌ ಅವರಿಗೆ ಇಡಿಯಿಂದ ಡಬ್ಬಲ್‌ ಶಾಕ್‌ ಸಿಕ್ಕಿದೆ. ಮೊದಲನೇಯದಾಗಿ ಸೆ.12 ವಿಚಾರಣೆಗೆ ಬರುವಂತೆ ಇಡಿಯಿಂದ ಡಿಕೆಶಿ ಪುತ್ರಿಗೆ ಸಮನ್ಸ್‌ ಜಾರಿ ಮಾಡಲಾಗಿದೆ ಎನ್ನಲಾಗಿದೆ. ಡಿ.ಕೆ ಶಿವಕುಮಾರ್‌ ಅವರ ಐಶ್ವರ್ಯ ಅವರಿಗೆ ಸಮನ್ಸ್‌ ನೀಡಿದೆ.

2017ರ ನವೆಂಬರ್ ತಿಂಗಳಿನಲ್ಲಿ ಶಿವಕುಮಾರ್ ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದರು. ಈಗ ಮತ್ತೆ ವಿಚಾರಣೆಗೆ ಬರುವಂತೆ ಡಿ.ಕೆ ಶಿವಕುಮಾರ್‌ ಪುತ್ರಿ ಐಶ್ವರ್ಯ ಬರುವಂತೆ ಇಡಿ ಹೇಳಿದೆ.

ಈ ಹಿಂದೆ ಐಟಿ ವಿಚಾರಣೆ ವೇಳೆಯಲ್ಲಿ ನನ್ನ ಮಗಳು ಐಶ್ವರ್ಯ ಸ್ವತಂತ್ರವಾಗಿ ವ್ಯಾಪಾರ ಮಾಡುವ ಉದ್ದೇಶದಿಂದ ಸೋಲ್‌ ಸ್ಪೇಸ್‌ ಅರೇನಾದಲ್ಲಿ ಶೇ.50ರಷ್ಟು ಷೇರು ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದಾಳೆ.
ಇದಕ್ಕಾಗಿ ಆಕೆ, ರಿಯಲ್‌ ಎಸ್ಟೇಟ್‌ ಪ್ರಾಪರ್ಟಿಗಳಲ್ಲಿ ಷೇರು ಖರೀದಿಸಿ, ಪ್ರತ್ಯೇಕವಾಗಿ ರಿಯಲ್‌ ಎಸ್ಟೇಟ್‌ ಬಿಸಿನೆಸ್‌ ಆರಂಭಿಸಿದ್ದಾಳೆ. ಅದಕ್ಕೆ ಐಟಿ ರಿಟರ್ನ್‌ ಸಲ್ಲಿಸುತ್ತಿದ್ದಾಳೆ,' ಎಂದು ಡಿ.ಕೆ ಶಿವಕುಮಾರ್‌ ಐಟಿ ಅಧಿಕಾರಿಗಳಿಗೆ ವಿವರಣೆ ನೀಡಿದ್ದರು. ಆದರೆ ಆದರೆ, ಮಗಳು ಕೋಟ್ಯಂತರ ರೂ. ಸಾಲ ಪಡೆದಿರುವುದಕ್ಕೆ ಪ್ರತಿಯಾಗಿ ಭದ್ರತೆ ರೂಪದಲ್ಲಿ ನೀಡಿರುವ ಸ್ವತ್ತು ಅಥವಾ ಗ್ಯಾರಂಟಿ ಕುರಿತು ಮಾಹಿತಿ ನೀಡಿಲ್ಲ ಹೀಗಾಗಿ ಈಗ ಇಡಿ ವಿಚಾರಣೆಗೆ ಬರುವಂತೆ ಹೇಳಿದೆ.

ಇನ್ನೊಂದು ವಿಷಯ ಏನಪ್ಪ ಅಂದ್ರೆ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ಬಳಿ ಇರುವ ಸೋಲಾರ್ ಪವರ್ ಪ್ಲಾಂಟ್ ಮುಟ್ಟುಗೋಲು ಹಾಕಲು ಪವರ್ ಪ್ಲಾಂಟ್​​ನ ದಾಖಲೆ ಪತ್ರಗಳನ್ನು ಇಡಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಬಳ್ಳಾರಿಯ ಹಗರಿಬೊಮ್ಮನಹಳ್ಳಿ ಬಳಿಯ 1,950 ಎಕರೆ ಜಮೀನಿನಲ್ಲಿ ಪವರ್ ಪ್ಲಾಂಟ್ ನಿರ್ಮಾಣ ಮಾಡಿದ್ದು, ಇದರ ಶೇ. 60 ರಷ್ಟು ಪಾಲುದಾರಿಕೆಯನ್ನ ಡಿಕೆಶಿ ಹೊಂದಿದ್ದಾರೆ. ಹೀಗಾಗಿ ಇದರ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.


Comments