ಮತ್ತೆ ಒಂದಾದ ಯಡಿಯೂರಪ್ಪ ಮತ್ತು ಬಿಜೆಪಿ ಅದ್ಯಕ್ಷ  ನಳೀನ್!! ಬಲಿಷ್ಠವಾಯ್ತು ಬಿಜೆಪಿ!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನಡುವಿನ ಶೀತಲ ಸಮರಕ್ಕೆ ಪಕ್ಷದ ವರಿಷ್ಠರು ಬ್ರೇಕ್ ಹಾಕಿದ್ದಾರೆ.

ಈವರೆಗೆ ಆಗಿದ್ದಾಯ್ತು ಇನ್ನು ಮುಂದೆ ಸಹಮತದಿಂದ ಮುಂದುವರೆಯಿರಿ ಎಂದು ಪಕ್ಷದ ವರಿಷ್ಠರು ಇಬ್ಬರು ನಾಯಕರಿಗೂ ಒಂದೇ ಸಂದೇಶವನ್ನು ರವಾನಿಸಿದ್ದಾರೆ. ವರಿಷ್ಠರ ಮಧ್ಯ ಪ್ರವೇಶದ ನಂತರ ಉಭಯ ನಾಯಕರು ಕೋಲ್ಡ್ ವಾರ್ ಕೈಬಿಟ್ಟಿದ್ದಾರೆ ಎನ್ನಲಾಗಿದೆ.

ಪಕ್ಷದ ಪದಾಧಿಕಾರಿಗಳ ನೇಮಕ ಮತ್ತು ಸರ್ಕಾರದಲ್ಲಿ ನೇಮಕಾತಿ ಹಾಗೂ ಬಿಬಿಎಂಪಿ ಮೇಯರ್ ಆಯ್ಕೆ ವಿಚಾರದಲ್ಲಿ ಯಡಿಯೂರಪ್ಪ ಮತ್ತು ನಳಿನ್ ಕುಮಾರ್ ನಡುವೆ ಶೀತಲ ಸಮರ ನಡೆದಿದ್ದು, ಯಡಿಯೂರಪ್ಪ ನೀಡಿದ ತಂತಿ ಮೇಲೆ ನಡಿಗೆ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ವರಿಷ್ಠರು ಮಧ್ಯಪ್ರವೇಶಿಸಿ ಇಬ್ಬರಿಗೂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ನಾನು ಮತ್ತು ನಳಿನ್ ಕುಮಾರ್ ಚರ್ಚಿಸಿ ಮೇಯರ್-ಉಪಮೇಯರ್ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ನಮ್ಮವರೇ ಆಯ್ಕೆಯಾಗಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ರಾಜ್ಯದ ನಾಯಕರ ತಂಡ ಚರ್ಚಿಸಿ ಮೇಯರ್-ಉಪಮೇಯರ್ ಆಯ್ಕೆ ಮಾಡಿದ್ದೇವೆ ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.

Comments