ಬಿಜೆಪಿಗೆ ಹೆಮ್ಮೆಯ ಸುದ್ದಿ: ಒಂದೆ ಏಟಿನಲ್ಲಿ ಎರಡು ಹೊಡೆತ ನೀಡಿದ ಗೌತಮ್ ಗಂಭಿರ್! ಕೆಳಗುರಿಲಿದ ಕಾಂಗ್ರೆಸ್!

ನವದೆಹಲಿ[ಅ. 01]  ಕರ್ತಾರ್ ಪುರ ಕಾರಿಡಾರ್ ಉದ್ಘಾಟನೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪಾಕಿಸ್ತಾನ ಆಹ್ವಾನ ನೀಡಿದ ವಿಚಾರವನ್ನು ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಬೌಂಡರಿಯಿಂದ ಆಚೆ ಕಳಿಸಿದ್ದಾರೆ.

 ಪಾಕಿಸ್ತಾನದ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಗಾಗಿ ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಆಹ್ವಾನವನ್ನು ನೀಡಲು ಪಾಕಿಸ್ತಾನ ನಿರ್ಧರಿಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಮಹಮೂದ್ ಖುರೇಷಿ ಹೇಳಿದ್ದರು.  ಆದರೆ ಈ ಆಹ್ವಾನವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಿರಸಕ್ಕರಿಸಿದ್ದಾರೆ ಎಂದು ವರದಿಯಾಗಿತ್ತು.

ಇಮ್ರಾನ್ ಖಾನ್ ಚಾಣಾಕ್ಷ ನಡೆಗೆ ಅದಕ್ಕಿಂತಲೂ ಚಾಣಾಕ್ಷ ರೀತಿ ಉತ್ತರ ನೀಡಿರುವ ಗಂಭೀರ್,  ಇದೊಂದು ಪಕ್ಕಾ ರಾಜಕೀಯ ಹೆಜ್ಜೆ.. ಮನಮೋಹನ್ ಸಿಂಗ್ ಅವರನ್ನು ಕಳಿಸುವುದೋ, ಬಿಡುವುದೋ ಎಂಬ ನಿರ್ಧಾರವನ್ನು ಕಾಂಗ್ರೆಸ್ ಪಾರ್ಟಿ ಮಾಡಬೇಕಿದೆ ಎಂದಿದ್ದಾರೆ.

ಕಾಂಗ್ರೆಸ್ ನಾಯಕ ಒಂದು ಕಾಲದ ಕ್ರಿಕೆಟರ್ ನವಜೋತ್ ಸಿಂಗ್ ಸಿಧು ಪಾಕಿಸ್ತಾನಕ್ಕೆ ಹಿಂದೆ ಭೇಟಿ ನೀಡಿ ಅಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿನ ಸೈನ್ಯದ ನಾಯಕನ ಅಪ್ಪಿಕೊಂಡಿದ್ದರು ಎಂಬುದನ್ನು ಉಲ್ಲೇಖ ಮಾಡಲು ಗಂಭೀರ್ ಮರೆತಿಲ್ಲ.

Comments