ಸ್ವಿಟ್ಜರ್ಲೆಂಡ್ ಸೌಂದರ್ಯಕ್ಕೆ ಮಾರು ಹೋದ ಸಿಎಂ ಬಿಎಸ್​ವೈ.!


ದಾವೋಸ್: ಕುಂತರೂ ರಾಜಕಾರಣ, ನಿಂತರೂ ರಾಜಕಾರಣ, 24 ಗಂಟೆಯೂ ರಾಜಕಾರಣಿದಲ್ಲಿ ಬ್ಯೂಸಿಯಾಗಿರುವ ಬಿಜೆಪಿ ಸೀನಿಯರ್ ಲೀಡರ್ ಈಗ ಸ್ವಲ್ಪ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಸಿಂಪಲ್ ಆಗಿರುತ್ತಿದ್ದವರು. ಈಗ ಸೂಟ್ ಬೂಟ್ ಹಾಕಿಕೊಂಡು ಫಾರಿನ್ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ.
         ಸಿಎಂ ಯಡಿಯೂರಪ್ಪ ಅವರು, ಆರ್ಥಿಕ ಸಮ್ಮೇಳನದಲ್ಲಿ ಭಾಗಿಯಾಗಲು ಸ್ವಿಜರ್ಲ್ಯಾಂಡ್ ನ ದಾವೂಸ್​ಗೆ ತೆರಳಿರುವ ಸಿಎಂ ಬೆಳಗಾಗುತ್ತಲೇ ಚಳಿಯಲ್ಲೂ ವಾಕ್ ಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ ಸ್ವಿಜರ್ಲ್ಯಾಂಡ್ ಸೌಂದರ್ಯ ಸವಿದಿದ್ದು, ಇಂದು ಬೆಳಗಾಗುತ್ತದಲೇ ಸೂಟು, ಬೂಟ್, ಗಾಗಲ್ಲು, ಕೊರಳಲ್ಲಿ ಶಾಲು, ಕೈಗೆ ಗ್ಲೌಸ್ ಹಾಕೊಂಡು ಸ್ವಿಜರ್ಲ್ಯಾಂಡ್ ಪ್ರಕೃತಿಯ ಅಹ್ಲಾದಕರ ವಾತಾವರಣ ಸವಿದಿದ್ದಾರೆ.
        
 ಇನ್ನು ಸರ್ಕಾರ, ಸಂಪುಟ ವಿಸ್ತರಣೆ, ಶಾಸಕರ ಲಾಬಿ, ಸೇರಿದಂತೆ ಹಲವು ತಲೆ ಬಿಸಿ ಮಾಡಿಕೊಂಡಿದ್ದ ಸಿಎಂ, ಈಗ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ಆರ್ಥಿಕ ಸಮ್ಮೇಳನದಲ್ಲಿ ಭಾಗಿಯಾಗಿ ನಂತರ ಬಿಡುವಿನ ವೇಳೆಯಲ್ಲಿ ಸ್ವಿಜರ್ಲ್ಯಾಂಡ್ ನ ಮಂಜಿನ ಸೌಂದರ್ಯ ಸವಿದಿದ್ದಾರೆ.
         ರಾಜಕೀಯದಲ್ಲಿ ಯಾವತ್ತೂ ಬಿಎಸ್​ವೈ ಕ್ರಿಯಾಶೀಲ ರಾಜಕಾರಣಿ, ದೇವೆಗೌಡರ ಬಳಿಕ ಅತ್ಯಂತ ಬ್ಯುಸಿ ಆಗಿರುವ ರಾಜಕಾರಣಿ, ಆದರೆ ಸ್ವಿಜರ್ಲ್ಯಾಂಡ್ ನಲ್ಲಿ ಕೊಂಚ ವಿಶ್ರಾಂತಿ ಪಡೆಯುತ್ತಿದ್ದು, ರಾಜ್ಯಕ್ಕೆ ಬಂದ ಮೇಲೆ ರಾಜಕಾರಣ ಇದ್ದದ್ದೇ ಅಂತ ಬಿಡುವಿನ ವೇಳೆಯಲ್ಲಿ ಪಕೃತಿ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.


Comments