ಇದೀಗ ಬಂದ ಸುದ್ದಿ: ಮೋದಿ ಸರ್ಕಾರದ 5 ಪ್ರಮುಖ ನಿರ್ಧಾರದಿಂದ ಕೋಟ್ಯಾಂತರ ಜನರಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್



ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸಂಪುಟವು ಭಾರತದ ಆರ್ಥಿಕತೆಗೆ ಶಕ್ತಿ ಮತ್ತು ವೇಗವನ್ನು ನೀಡಲು ಹಲವಾರು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಆರ್ಥಿಕತೆಯನ್ನು ವೇಗಗೊಳಿಸಲು ಹಲವಾರು ಪ್ರಸ್ತಾಪಗಳನ್ನು ಅನುಮೋದಿಸಲಾಗಿದೆ. ಈ ಎಲ್ಲಾ ನಿರ್ಧಾರಗಳು ಐತಿಹಾಸಿಕವಾಗಿದ್ದು, ಕೋಟ್ಯಂತರ ಭಾರತೀಯರು ಪ್ರಯೋಜನ ಪಡೆಯುತ್ತಾರೆ ಎಂದು ಸಭೆಯ ನಂತರ ಸ್ವತಃ ಪ್ರಧಾನ ಮಂತ್ರಿಯವರೇ ಮಾಹಿತಿ ನೀಡಿದ್ದಾರೆ.


1. ಸಣ್ಣ ವ್ಯಾಪಾರಿಗಳಿಗೆ ಸಾಲದಲ್ಲಿ 2% ಬಡ್ಡಿ ರಿಯಾಯಿತಿ :
ಲಾಕ್‌ಡೌನ್‌ನಿಂದಾಗಿ ಸಣ್ಣ ಉದ್ಯಮಗಳು ಸಾಕಷ್ಟು ನಷ್ಟ ಅನುಭವಿಸಿವೆ. ಅಂತಹ ಪರಿಸ್ಥಿತಿಯಲ್ಲಿ ಅಂತಹ ವ್ಯಾಪಾರಿಗಳನ್ನು ಉತ್ತೇಜಿಸಲು ಶಿಶು ಮುದ್ರಾ ಸಾಲವನ್ನು ಹೊಂದಿರುವವರಿಗೆ ಹೆಚ್ಚುವರಿ ಶೇಕಡಾ 2 ರಷ್ಟು ಬಡ್ಡಿ ರಿಯಾಯಿತಿ ನೀಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಶಿಶು ಮುದ್ರಾ ಸಾಲಕ್ಕೆ ಶೇಕಡಾ 2 ರಷ್ಟು ಬಡ್ಡಿ ರಿಯಾಯಿತಿ ನೀಡುವ ಪ್ರಸ್ತಾಪವನ್ನು ಸಂಪುಟ ಅಂಗೀಕರಿಸಿದೆ. ಇದರೊಂದಿಗೆ ಕೋಟಿ ಫಲಾನುಭವಿಗಳಿಗೆ 2% ಬಡ್ಡಿ ರಿಯಾಯಿತಿ ಸಿಗಲಿದೆ.


2. ಸಹಕಾರಿ ಬ್ಯಾಂಕುಗಳು ಕೇಂದ್ರದ ಮೇಲ್ವಿಚಾರಣೆಯಲ್ಲಿರುತ್ತವೆ :
ಇತ್ತೀಚೆಗೆ ಕೆಲವು ಸಹಕಾರಿ ಬ್ಯಾಂಕುಗಳಲ್ಲಿನ ಹಗರಣಗಳು ಮತ್ತು ಅಕ್ರಮಗಳ ವರದಿಗಳ ನಡುವೆ ಪರಿಹಾರದ ಸುದ್ದಿಯೊಂದು ಬಂದಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟವು ಎಲ್ಲಾ ಸಹಕಾರಿ ಬ್ಯಾಂಕುಗಳನ್ನು (ಅದು ನಗರ ಸಹಕಾರಿ ಬ್ಯಾಂಕುಗಳು ಅಥವಾ ಬಹು-ರಾಜ್ಯ ಸಹಕಾರಿ ಬ್ಯಾಂಕುಗಳಾಗಿರಬಹುದು) ರಿಸರ್ವ್ ಬ್ಯಾಂಕ್ (RBI) ಮೇಲ್ವಿಚಾರಣೆಯಲ್ಲಿ ಇಡಲು ನಿರ್ಧರಿಸಿದೆ. ದೇಶದಲ್ಲಿ 1482 ನಗರ ಸಹಕಾರಿ ಬ್ಯಾಂಕುಗಳು ಮತ್ತು 58 ಬಹು-ರಾಜ್ಯ ಸಹಕಾರಿ ಬ್ಯಾಂಕುಗಳಿವೆ. ಕ್ಯಾಬಿನೆಟ್ನ ಈ ತೀರ್ಮಾನದ ನಂತರ ಈ ಸಹಕಾರಿ ಬ್ಯಾಂಕುಗಳಲ್ಲಿ ಹಣವನ್ನು ಠೇವಣಿ ಇಡುವ ಕೋಟ್ಯಂತರ ಜನರಲ್ಲಿ ವಿಶ್ವಾಸ ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ ಈ ಬ್ಯಾಂಕುಗಳನ್ನು ಮುಚ್ಚುವ ಭಯವೂ ಕೊನೆಗೊಳ್ಳುತ್ತದೆ. ಸರ್ಕಾರದ ಈ ಹೆಜ್ಜೆ ಈ ಬ್ಯಾಂಕುಗಳ 8.6 ಕೋಟಿ ಠೇವಣಿದಾರರ ವಿಶ್ವಾಸವನ್ನೂ ಹೆಚ್ಚಿಸುತ್ತದೆ.

ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಪಾಕಿಸ್ತಾನದ ಪತ್ತೇದಾರಿ ಡ್ರೋನ್ ಹೊಡೆದುರುಳಿಸಿದ BSF


3. ಪಶುಸಂಗೋಪನೆ ಪ್ರಚಾರಕ್ಕಾಗಿ 15,000 ಕೋಟಿ ರೂ. :
ಬುಧವಾರ ನಡೆದ ಸಭೆಯಲ್ಲಿ ಪಶುಸಂಗೋಪನೆಯನ್ನು ಉತ್ತೇಜಿಸುವ ಪ್ರಸ್ತಾಪಕ್ಕೂ ಸಂಪುಟ ಅನುಮೋದನೆ ನೀಡಿದೆ. ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ 15,000 ಕೋಟಿ ರೂ. ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಎಚ್‌ಐಡಿಎಫ್) ಸ್ಥಾಪನೆಗೆ ಅನುಮೋದನೆ ನೀಡಿದೆ. ಹೂಡಿಕೆ ಮತ್ತು ಪ್ರಾದೇಶಿಕ ಮೂಲಸೌಕರ್ಯಗಳಿಗೆ ವಿಶೇಷವಾಗಿ ಡೈರಿಗಳಲ್ಲಿ ಪ್ರೋತ್ಸಾಹ ಸಿಗಲಿದ್ದು ಇದು ನಮ್ಮ ಶ್ರಮಶೀಲ ರೈತರ ಆದಾಯವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಹೇಳಿದರು.


4. ಖಾಸಗಿ ಕಂಪನಿಗಳಿಗೆ ಬಾಹ್ಯಾಕಾಶ ಕ್ಷೇತ್ರಕ್ಕೆ ಪ್ರವೇಶಿಸಲು ಅವಕಾಶ :

ಅಮೆರಿಕದ ಮಾರ್ಗದಲ್ಲಿ ಭಾರತವು ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ತೆರೆಯಲು ನಿರ್ಧರಿಸಿದೆ. ವಿದ್ಯಾರ್ಥಿಗಳು ಮತ್ತು ಖಾಸಗಿ ಕಂಪನಿಗಳಿಗೆ ಭಾರತದ ಬಾಹ್ಯಾಕಾಶ ಕ್ಷೇತ್ರವನ್ನು ತೆರೆಯುವ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈಗ ಬಾಹ್ಯಾಕಾಶ ಚಟುವಟಿಕೆಗಳ ಸಂಪೂರ್ಣ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ದೂರಗಾಮಿ ಸುಧಾರಣೆಗಳನ್ನು ಅನುಮೋದಿಸಿದೆ.


5. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಪಟ್ಟಿಗೆ ಕುಶಿನಗರ ವಿಮಾನ ನಿಲ್ದಾಣ :
ಬುಧವಾರ ನಡೆದ ಕ್ಯಾಬಿನೆಟ್ ಸಭೆ ಉತ್ತರ ಪ್ರದೇಶಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಅಲ್ಲದೆ ಯುಪಿಯಲ್ಲಿ ವಾಸಿಸುವ ಕೋಟ್ಯಂತರ ಜನರಿಗೆ ಒಂದು ಸಂತಸದ ಸುದ್ದಿಯನ್ನು ನೀಡಿದೆ. ಉತ್ತರಪ್ರದೇಶದ ಕುಶಿನಗರದಲ್ಲಿನ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲು ಸಹ ಸಂಪುಟವು ಅವಕಾಶ ನೀಡಿದೆ. ಸರ್ಕಾರದ ಈ ನಿರ್ಧಾರದಿಂದ ವಿದೇಶದಲ್ಲಿ ವಾಸಿಸುವ ಬೌದ್ಧಧರ್ಮದ ಅನುಯಾಯಿಗಳಿಗೆ ಕುಶಿನಗರಕ್ಕೆ ಬರುವುದು ಸುಲಭವಾಗುತ್ತದೆ. ಥೈಲ್ಯಾಂಡ್, ಜಪಾನ್, ವಿಯೆಟ್ನಾಂ, ಶ್ರೀಲಂಕಾದಂತಹ ದೇಶಗಳ ಅನೇಕ ಅನುಯಾಯಿಗಳು ಇಲ್ಲಿಗೆ ಬರಲು ಬಯಸುತ್ತಾರೆ. ಕುಶಿನಗರ ಮಹಾತ್ಮ ಬುದ್ಧನ ನಿರ್ವಾಣ ತಾಣವಾಗಿದೆ, ಆದ್ದರಿಂದ ಇದನ್ನು ಈಗ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿಪಡಿಸಲು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಗಿದೆ.

Comments