ಕೇಂದ್ರ ಸರ್ಕಾರವೇ ಝೂಮ್ ಆ್ಯಪ್ ಬಳಸದಂತೆ ಸೂಚಿಸಿತ್ತು. ಇಷ್ಟೇ ಅದು ಚೀನಿ ಆ್ಯಪ್ ಅನ್ನೋ ಮಾತುಗಳು ಕೇಳಿಬಂದಿದೆ. ಇಷ್ಟಾಗಿಯೂ ಝೂಮ್ ಆ್ಯಪ್ ಬ್ಯಾನ್ ಪಟ್ಟಿಯಲ್ಲಿ ಇಲ್ಲ ಯಾಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರಶ್ನಿಸಿದ್ದಾರೆ. ಝೂಮ್ಮಾತ್ರವಲ್ಲ ಪಬ್‌ಜಿ ಕೂಡ ಬ್ಯಾನ್ ಮಾಡಿಲ್ಲ ಯಾಕೆ ಎಂದು ಕೇಳಿದ್ದಾರೆ.
ಝೂಮ್ ಚೀನಾ ಆ್ಯಪ್?
ಝೂಮ್ ಚೀನಾ ಆ್ಯಪ್ ಅಲ್ಲ. ಇದು ಅಮೆರಿಕದ ಕಂಪನಿ. ಝೂಮ್ ಆ್ಯಪ್ ಹುಟ್ಟು ಹಾಕಿದ್ದು ಚೀನಾ ಮೂಲದ ಅಮೆರಿಕ ಉದ್ಯಮಿ ಎರಿಕ್ ಯುಆನ್. ಇದರ ಪ್ರಧಾನ ಕಚೇರಿ ಇರುವುದು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸೆಯಲ್ಲಿ. ಜೂಮ್ ಕಂಪನಿಯ ಸಸಿಇಓ ಆಗಿರುವ ಎರಿಕ್ ಯುಆನ್ ಅಮೆರಿಕ ಪೌರತ್ವ ಹೊಂದಿದ್ದಾರೆ. ಆಗಾಗಲೇ ಎರಿಕ್ ಝೂಮ್ ಆ್ಯಪ್ ಚೀನಾದಲ್ಲ, ಇದು ಅಮೆರಿಕದ ಆ್ಯಪ್ ಎಂದು ಸ್ಪಷ್ಟಪಡಿಸಿದ್ದಾರೆ. ಝೂಮ್ ಆ್ಯಪ್ ಡಾಟಾ ಶೇಖರಣೆಯ ಸರ್ವರ್ ಇರುವುದು ಅಮೆರಿಕದಲ್ಲಿ.
ಇಷ್ಟೇ ಅಲ್ಲ ಚೀನಾದಲ್ಲಿ ಶಾಖೆ ಹೊಂದಿರುವ ಈ ಆ್ಯಪ್ ಹೆಚ್ಚು ಚೀನಿಯರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಭಾರತದ ಸೈಬರ್ ಕಾರ್ಡಿನೇಟ್ ಸೆಂಟರ್ ಝೂಮ್ ಆ್ಯಪ್ ಬಳಕೆ ಮಾಡುವಾಗ ಎಚ್ಚರ ವಹಿಸುವಂತೆ ಸೂಚಿಸಿತ್ತು. ಝೂಮ್ ಆ್ಯಪ್ ಬಳಕೆ ಮಾಡುವಾಗ ಎಚ್ಚರ ವಹಿಸುವಂತೆ ಸೂಚಿಸಿತ್ತು. ಝೂಮ್ ಚೀನಾ ಆ್ಯಪ್ ಅಲ್ಲ.
ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ನಿಮಯ ಪಾಲಿಸಿರುವ ಝೂಮ್ ಆ್ಯಪ್‌ನ್ನು ಭಾರತ ಬ್ಯಾನ್ ಮಾಡಿಲ್ಲ. ಇನ್ನು ಪಬ್‌ಜಿ, ವ್ಯಾಟ್ಸಾಪ್ ಕೂಡ ಚೀನಾ ಆ್ಯಪ್‌ಗಳಲ್ಲ. ಪಬ್‌ಡಿ ಡೆವಲಪ್ ಮಾಡಿದ ವ್ಯಕ್ತಿ ಐರ್ಲೆಂಡ್‌ನ ಬ್ರೆಂಡನ್ ಗ್ರೀನಿ. ಸೌತ್ ಕೊರಿಯಾದ ವಿಡಿಯೋ ಗೇಮ್ ಪಬ್ಲಿಶಿಂಗ್ ಪಾರ್ಟ್ನರ್ ಸಹಾಯವನ್ನು ಚೀನಾ ನೀಡುತ್ತಿದೆ. ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ ಒಡೆತನದ ವ್ಯಾಟ್ಸಾಪ್ ಅಮೆರಿಕದ ಕಂಪನಿ. ಹೀಗಾಗಿ ಈ ಜನಪ್ರಿಯ ಆ್ಯಪ್‌ಗಳು ಬ್ಯಾನ್ ಆಗಿಲ್ಲ. ...
Comments
Post a Comment