ಈ ಮಾಲ್ವೇರ್‌ಗಳನ್ನು ಮೊದಲೇ ವಿದ್ಯುತ್ ಉಪಕರಣಗಳಲ್ಲಿ ಅಳವಡಿಸಿ ಭಾರತಕ್ಕೆ ಕಳಿಸಿ, ನಂತರ ಚೀನಾದವರು ಸುಲಭವಾಗಿ ಹ್ಯಾಕ್ ಮಾಡಬಹುದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.
ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಈ ಮಾಹಿತಿ ನೀಡಿದ್ದು, ‘ದೇಶದ ಎಲ್ಲಾ ಉದ್ದಿಮೆಗಳು, ಸಂಪರ್ಕ ವ್ಯವಸ್ಥೆಗಳು, ದತ್ತಾಂಶ ಸಂಗ್ರಹಣೆ ವ್ಯವಸ್ಥೆಗಳು ಹಾಗೂ ಇನ್ನಿತರ ವ್ಯೂಹಾತ್ಮಕ ವ್ಯವಸ್ಥೆಗಳು ವಿದ್ಯುತ್ತಿನಿಂದಲೇ ನಡೆಯುತ್ತವೆ. ಚೀನಾದಿಂದ ಆಮದಾಗುವ ವಿದ್ಯುತ್ ಉಪಕರಣಗಳು ಎಲ್ಲೆಡೆ ಬಳಕೆಯಾಗುತ್ತಿವೆ. ಹೀಗಾಗಿ ಈ ಉಪಕರಣಗಳಲ್ಲಿ ಮೊದಲೇ ಮಾಲ್ವೇರ್ ಅಥವಾ ಟ್ರೋಜನ್‌ಗಳಿದ್ದರೆ ಚೀನಾದ ಹ್ಯಾಕರ್‌ಗಳು ಸುಲಭವಾಗಿ ವಿದ್ಯುತ್ ವ್ಯವಸ್ಥೆಯನ್ನು ಹಾಳುಗಡೆವಬಹುದು.
ಹೀಗಾಗಿ ನಾವು ಚೀನಾ, ಪಾಕಿಸ್ತಾನದಂತಹ ದೇಶದಿಂದ ಆಮದು ಮಾಡಿಕೊಳ್ಳುವ ವಿದ್ಯುತ್ ಉತ್ಪನ್ನಗಳನ್ನು ವ್ಯಾಪಕವಾಗಿ ಪರೀಕ್ಷೆ ನಡೆಸಿದ ನಂತರವೇ ದೇಶದೊಳಕ್ಕೆ ಬಿಟ್ಟುಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.
Comments
Post a Comment