ಬ್ರೇಕಿಂಗ್‌ ನ್ಯೂಸ್: ದಿಢೀರನೆ ಗಡಿಯಲ್ಲಿ ಟೆಂಟ್ ಹಾಕಿದ ಚೀನಾ: ಮತ್ತೆ ಟೆನ್ಷನ್, ಟೆನ್ಷನ್




ದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ಭಾರತ-ಚೀನಾ ಸೈನಿಕರ ಮಧ್ಯೆ ಘರ್ಷಣೆ ಸಂಭವಿಸಿತ್ತು. ಅಂದು ಕರ್ನಲ್ ಸಂತೋಷ್ ಬಾಬು ನೇತೃತ್ವದ ತಂಡ ಚೀನಾ ಟೆಂಟ್​ಗಳನ್ನು ನಾಶಪಡಿಸಿತ್ತು. ಆದ್ರೆ ಇಂದು ದಿಢೀರನೆ ಮತ್ತೆ ಚೀನಾ ಟೆಂಟ್ ತಲೆ ಎತ್ತಿದ್ದು, ಗಡಿಯಲ್ಲಿ ಮತ್ತೆ ಟೆನ್ಷನ್ ಹೆಚ್ಚಾಗಿದೆ.

ಗಾಲ್ವಾನ್ ಕಣಿವೆಯಲ್ಲಿ 10 ಸಾವಿರಕ್ಕೂ ಹೆಚ್ಚಿನ ಸೈನಿಕರನ್ನು ‌ಚೀನಾ ನಿಯೋಜನೆ ಮಾಡಿದೆ. ಪಾಂಗೋಂಗೋ ತ್ಸೋ ಸರೋವರ, ದೀಪಸಾಂಗ್ ಬಳಿ ಭಾರತದ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡು ಸುಮಾರು 15 ಸ್ಥಳಗಳಲ್ಲಿ ಹೆಚ್ಚಿನ‌ ಸೈನಿಕರನ್ನು ಚೀನಾ ನೇಮಿಸಿದೆ.

Comments