ಭಾರತದ ಭಾರತ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಎಂಬ ಔಷಧವನ್ನು ಮಾನವರ ಮೇಲೆ ಪ್ರಯೋಗ ಮಾಡಲು ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ ಒಪ್ಪಿಗೆ ನೀಡಿದೆ. ಈ ಒಪ್ಪಿಗೆ ಪಡೆದ ದೇಶದ ಮೊದಲ ಲಸಿಕೆ ಇದಾಗಿದೆ.
ಮಾನವರ ಮೇಲೆ ಮೊದಲ ಮತ್ತು ಎರಡನೇ ಹಂತದ ಪ್ರಯೋಗ ನಡೆಸಲು ಸಂಸ್ಥೆಗೆ ಅನುಮತಿ ನೀಡಲಾಗಿದೆ. ಈ ಪ್ರಯೋಗವು ಜುಲೈ ತಿಂಗಳಲ್ಲಿ ದೇಶಾದ್ಯಂತ ನಡೆಯಲಿದೆ ಎಂದು ಹೈದ್ರಾಬಾದ್ ಮೂಲದ ಕಂಪನಿ ಹೇಳಿಕೊಂಡಿದೆ. ' ಮಾನವ ಪ್ರಯೋಗ ಪರೀಕ್ಷೆ ವೇಳೆ ಲಸಿಕೆಯು ಭರವಸೆದಾಯಕವಾಗಿತ್ತು ಜೊತೆಗೆ ಸುರಕ್ಷತೆ ಮತ್ತು ಪರಿಣಾಮಕಾರಿ ಜೀವರಕ್ಷಕ ವ್ಯವಸ್ಥೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಕಂಪನಿ ಹೇಳಿಕೊಂಡಿದೆ.
Comments
Post a Comment