‘ಬ್ಯಾಂಕ್ ಆಫ್ ಚೀನಾ ಭಾರತದಲ್ಲಿ ಕಾರ‍್ಯನನಿರ್ವಹಿಸಲು ರಿಸವ್‌ರ್ ಬ್ಯಾಂಕ್ ಆಫ್ ಇಂಡಿಯಾ ಪರವಾನಗಿ ನೀಡಿದೆ. ಚೀನಾ ನಾಯಕತ್ವಕ್ಕೆ ನಮ್ಮ ಪ್ರಧಾನಿ ಮೋದಿ ಕೊಟ್ಟಿರುವ ಆಶ್ವಾಸನೆ ಇದಾಗಿದೆ’ ಎಂದು ಎಎನ್‌ಐ ಸುದ್ದಿಸಂಸ್ಥೆ ಹೆಸರಿನಲ್ಲಿ ಟ್ವೀಟ್ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ಬ್ಯಾಂಕ್ ಆಫ್ ಚೀನಾ ಭಾರತದಲ್ಲಿ ಈಗ ಶಾಖೆ ತೆರೆದಿದೆಯೇ ಎಂದು ಪರಿಶೀಲಿಸಿದಾಗ ವೈರಲ್ ಸುದ್ದಿ ಸುಳ್ಳು ಎಂಬುದು ಸಾಬೀತಾಗಿದೆ. ಏಕೆಂದರೆ ಬ್ಯಾಂಕ್ ಆಫ್ ಚೀನಾ ಭಾರತದಲ್ಲಿ ತನ್ನ ಶಾಖೆ ತೆರೆಯಲು 2018ರಲ್ಲಿಯೇ ಆರ್‌ಬಿಐ ಅನುಮತಿ ನೀಡಿತ್ತು. ಅದರನುಸಾರ ಬ್ಯಾಂಕ್ ಆಫ್ ಚೀನಾ ಕಳೆದ ವರ್ಷ ಜೂನ್‌ನಲ್ಲಿ ಭಾರತದಲ್ಲಿ ತನ್ನ ಮೊದಲ ಶಾಖೆ ತೆರೆದಿದೆ. ಎಎನ್ ಸುದ್ದಿಸಂಸ್ಥೆ 2018ರ ಜುಲೈ ನಾಲ್ಕರಂದು ಮಾಡಿದ್ದ ಟ್ವೀಟಿನ ದಿನಾಂಕವನ್ನು ಕತ್ತರಿಸಿ ಈಗ ಸುಳ್ಳುಸುದ್ದಿ ಹರಡಲಾಗುತ್ತಿದೆ..
Comments
Post a Comment