ಇದೀಗ ಬಂದ ಸುದ್ದಿ : ಚೀನಾ ನಮ್ಮ ಸೈನಿಕರೂ ಸತ್ತಿದ್ದಾರೆ ಎನ್ನುವ ಚೀನಾ ಸಂಖ್ಯೆ ಮಾತ್ರ ಹೇಳುತ್ತಿಲ್ಲ!! ಚೀನಾ ಗಲ್ವಾನ್ ಸಾವಿನ ಸಂಖ್ಯೆ ಹೇಳದಿರಲು ಕಾರಣ ಗೊತ್ತಾಯ್ತು!






ವಾಷಿಂಗ್ಟನ್: ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಭೀಕರ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ ಎಂಬುದು ಇಡೀ ವಿಶ್ವಕ್ಕೆ ಗೊತ್ತಿದೆ.


ಆದರೆ ಈ ಘರ್ಷಣೆಯನ್ನು ಚೀನಾ ಸೇನೆಯ ಎಷ್ಟು ಸೈನಿಕರು ಮೃತಪಟ್ಟಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ, ಕಾರಣ ಚೀನಾ ತನ್ನ ಸೈನಿಕರ ಸಾವಿನ ಸಂಖ್ಯೆಯನ್ನು ಅಧಿಕೃತವಾಗಿ ಘೋಷಿಸಿಯೇ ಇಲ್ಲ.

ಚೀನಾ ಏಕೆ ತನ್ನ ಸೈನ ಇಕರ ಸಾವನ್ನು ಘೋಷಣೆ ಮಾಡಿಲ್ಲ ಎಂದು ಇಡೀ ವಿಶ್ವವೇ ಪ್ರಶ್ನಿಸುತ್ತಿದ್ದು, ಇದಕ್ಕೆ ಚೀನಾದ ಮಾಜಿ ಕಮ್ಯೂನಿಸ್ಟ್ ನಾಯಕನ ಪುತ್ರ ಹಾಗೂ ವಾಷಿಂಗ್ಟನ್‌ನಲ್ಲಿ ನೆಲೆಸಿರುವ ಚೀನಾ ಸರ್ಕಾರ ವಿರೋಧಿ ಬರಹಗಾರ ಉತ್ತರಿಸಿದ್ದಾರೆ.


ಚೀನಾ ನಾಗರಿಕ ಶಕ್ತಿ ಸಂಘಟನೆಯ ಮುಖ್ಯಸ್ಥ ಜೈನ್ಲಿ ಯಾಂಗ್ ಅಭಿಪ್ರಾಯಪಡುವಂತೆ, ಗಲ್ವಾನ್ ಘರ್ಷಣೆಯಲ್ಲಿ ಹತರಾದ ಸೈನಿಕರ ಸಂಖ್ಯೆ ಹೇಳಿದರೆ ಚೀನಾದಲ್ಲಿ ಕ್ಷಿಪ್ರ ಮಿಲಟರಿ ಕ್ರಾಂತಿಯೇ ಸಂಭವಿಸಬಹುದು ಎಂದು ಅಂದಾಜಿಸಿದ್ದಾರೆ.

ಸರ್ಕಾರ ಸೈನಿಕರನ್ನು ಅತ್ಯಂತ ಕೀಳಾಗಿ ಕಾಣುವ ಪ್ರವೃತ್ತಿಯಿಂದ ಬೇಸತ್ತಿರುವ ಚೀನಾದ ನಿವೃತ್ತ ಮಿಲಿಟರಿ ಅಧಿಕಾರಿಗಳು, ಕ್ಸಿ ಜಿನ್‌ಪಿಂಗ್ ಆಡಳಿತದ ವಿರುದ್ಧ ಮಿಲಿಟರಿ ದಂಗೆ ಭುಗಿಲೇಳುವಂತೆ ಮಾಡಬಹುದು ಎಂದು ಜೈನ್ಲಿ ಯಾಂಗ್ ಹೇಳಿದ್ದಾರೆ.


ಸೇನೆಯ ಕುರಿತು ಕ್ಸಿ ಜಿನ್‌ಪಿಂಗ್ ಆಡಳಿತ ಹೊಂದಿರುವ ಉಡಾಫೆಯ ಮನೋಭಾವನೆಯಿಂದ, ನಿವೃತ್ತ ಸೇನಾಧಿಕಾರಿಗಳಲ್ಲಿ ಹಾಗೂ ಸದ್ಯ ಸೇವೆ ಸಲ್ಲಿಸುತ್ತಿರುವ ಮಿಲಿಟರಿ ಅಧಿಕಾರಿಗಳಲ್ಲಿ ತೀವ್ರ ಆಕ್ರೋಶವಿದೆ.

ಇದೇ ಕಾರಣಕ್ಕೆ ಗಲ್ವಾನ್ ಘರ್ಷಣೆಯಲ್ಲಿ ಹತರಾದ ಸೈನಿಕರ ಸಾವನ್ನು ಮುಚ್ಚಿಡುತ್ತಿರುವ ಚೀನಾ, ಒಂದು ವೇಳೆ ಸಾವಿನ ಸಂಖ್ಯೆ ಘೋಷಿಸಿದರೆ ಮಿಲಿಟರಿ ಕ್ಷಿಪ್ರ ಕ್ರಾಂತಿ ಎದುರಿಸಬೇಕಾಗಿ ಬರಬಹುದು ಎಂಬ ಆತಂಕದಲ್ಲಿದೆ ಎಂದು ಜೈನ್ಲಿ ಯಾಂಗ್  ಅಭಿಪ್ರಾಯಪಟ್ಟಿದ್ದಾರೆ.

Comments