ಇಂದು ಡಿಕೆಶಿ ಮನೆಯಲ್ಲಿ ಸಿಬಿಐ ತನಿಕೆ!ಡಿಕೆಶಿ ನಿವಾಸದಲ್ಲಿ ಸಿಕ್ಕಿದ್ದಾದರೂ ಏನು?

ತಮ್ಮ ವಿರುದ್ಧ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನೀಡಿದ್ದ ಅನುಮತಿಯನ್ನು ರದ್ದು ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಶಶಿಕುಮಾರ್ ಮನವಿಯನ್ನು ಕರ್ನಾಟಕ  ಹೈಕೋರ್ಟ್ ತಳ್ಳಿಹಾಕಿದೆ. ದೆಹಲಿಯ ಡಿಕೆಶಿ ನಿವಾಸದಲ್ಲಿ ಸಿಕ್ಕ ಅಕ್ರಮ ಹಣ ಪ್ರಕರಣವನ್ನು ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಅದರಂತೆ ಈ ಬಗ್ಗೆ ಸಿಬಿಐ ಪರಿಶೀಲನೆ ನಡೆಸುತ್ತಿದೆ. 

ಈ ತನಿಖೆಯನ್ನು ರದ್ದು ಮಾಡುವಂತೆ ಡಿಕೆ ಶಿವಕುಮಾರ್ ಆಪ್ತ ಶಶಿಕುಮಾರ್ ಶಿವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಶಶಿಕುಮಾರ್ ಶಿವಣ್ಣ ಅವರ ಅರ್ಜಿಯಲ್ಲಿ ವಜಾಗೊಳಿಸಿದೆ.   ಇದೇ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಸುಮಾರು 50 ದಿನಗಳ ಕಾಲ ಜೈಲಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ಡಿಕೆಶಿ, ಕೆಪಿಸಿಸಿ ಸಾರಥಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಮಧ್ಯೆ ಈ ಸಿಬಿಐ ತನಿಖೆ ಸಂಕಷ್ಟ ಎದುರಾಗಲಿದೆ.