ಇದೀಗ ಬಂದ ಸುದ್ದಿ: ಕೊನೆಗೂ ತುಟಿ ಬಿಚ್ಚಿದ ಕಾಂಗ್ರೆಸ್ಸಿಗರು!!!

ಬೆಂಗಳೂರು: ಕಾಂಗ್ರೆಸ್ ಪಕ್ಷ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿಚಾರವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಅಲ್ಲದೇ ಮೈತ್ರಿ ಸರ್ಕಾರದ ವಿಚಾರವಾಗಿಯೂ ಸಿದ್ದರಾಮಯ್ಯ ವಿರುದ್ಧ ಚಾಟಿ ಬೀಸಿದ್ದರು. ಈ ವಿಚಾರಗಳಿಗೆ ಸಂಬಂಧಿಸಿದಂತೆ ಇಂದು ಕೆಪಿಸಿಸಿ ಉಪಾಧ್ಯಕ್ಷ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.
ನಾವು ಕುಮಾರಸ್ವಾಮಿ ಅವರಿಗೆ ಉತ್ತರ ಕೊಡುವುದಿಲ್ಲ, ಜನರಿಗೆ ಉತ್ತರ ಕೊಡುತ್ತೇವೆ. ಕಾಂಗ್ರೆಸ್ ನವರು ಉತ್ತರ ಕೊಡದೇ ಓಡಿ ಹೋಗುವ ಪಲಾಯನವಾದಿಗಳಲ್ಲ. ಯಾವುದೇ ಸಂದರ್ಭದಲ್ಲಿ ಆದರೂ ಹೆದರಿಸುವ ನೈತಿಕತೆ ಇದೆ. ಬಿಜೆಪಿ ಸರ್ಕಾರದ ಲೋಪಗಳನ್ನ ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದೇವೆ ಅಷ್ಟೇ.. ಇದರಲ್ಲಿ ಯಾವುದೇ ಪ್ರಚಾರವನ್ನೂ ಪಡೆಯುತ್ತಿಲ್ಲ ಎಂದಿದ್ದಾರೆ.
ಈಶ್ವರ್ ಖಂಡ್ರೆ, ಕೆಪಿಸಿಸಿ ಉಪಾಧ್ಯಕ್ಷ
ಇನ್ನು ಸರ್ಕಾರದ ಅವ್ಯವಹಾರದ ದಾಖಲೆಗಳಿದ್ದರೆ ಇನ್ನೂ ಯಾಕೆ ದೂರು ಕೊಟ್ಟಿಲ್ಲ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ.. ಕುಮಾರಸ್ವಾಮಿ ಯಾವ ಉದ್ದೇಶಕ್ಕಾಗಿ ಹೇಳಿದ್ದಾರೋ ಗೊತ್ತಿಲ್ಲ, ಯಾವ ಏಜೆನ್ಸಿಗೆ ಕೊಡಬೇಕು ಅಂತಾ ಅವರೇ ಹೇಳಲಿ. ಅವರು ಹೇಳಿದ ಏಜೆನ್ಸಿಗೆ ಕೊಡುತ್ತೇವೆ. ಅವರೂ ದಾಖಲೆಗಳನ್ನ ಕೊಡಲಿ, ಅವರೂ ಪ್ರತಿಪಕ್ಷದಲ್ಲಿ ಇದ್ದಾರೆ ಅಲ್ಲವೇ.. ಅವರಿಗೂ ಜವಾಬ್ದಾರಿ, ಕಳಕಳಿ ಇಲ್ಲವೇ? ಎಂದು ಕುಮಾರಸ್ವಾಮಿ ವಿರುದ್ಧ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯಲ್ಲಿ ಭಿನ್ನಮತ ವಿಚಾರಕ್ಕೆ ಪ್ರತಿಕ್ರಿಯಿಸಿ.. ಭಾರತೀಯ ಜನತಾ ಪಕ್ಷದಲ್ಲಿ ಭಿನ್ನಮತವಿದೆ, ದಿನನಿತ್ಯವೂ ಒಬ್ಬೊಬ್ಬರು ಒಂದೊಂದು ಕಡೆ ಇರ್ತಾರೆ, ಒಬ್ಬೊಬ್ಬರು ಒಂದೊಂದು ಹೇಳಿಕೆಗಳನ್ನ ಕೊಡುತ್ತಾರೆ. ನಿಗಮ, ಮಂಡಳಿಯಲ್ಲೂ ಅತೃಪ್ತಿ ಹೊಗೆಯಾಡ್ತಿದೆ. ಬಿಜೆಪಿಯನ್ನ ಯಾರೂ ಅಸ್ತಿರಗೊಳಿಸಲ್ಲ, ಅವರೇ ಸರ್ಕಾರವನ್ನ ಅಸ್ಥಿರಗೊಳಿಸಿಕೊಳ್ತಾರೆ. ಸರ್ಕಾರ ಬೀಳುತ್ತೆ ಅನ್ನೋದನ್ನ ಯಾಕೆ ಹೇಳಬೇಕು..? ಆ ಸಂದರ್ಭ ಬಂದಾಗ ಕಾಂಗ್ರೆಸ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.