ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿಯ ಓರ್ವ ನಾಯಕ ಕೇಳಿದ ಪ್ರಶ್ನೆಗೆ ಉತ್ತರವೇ ಇಲ್ಲ!ಸರಿಯಾದ ಟಾಂಗ್ ಕೊಟ್ಟ ಈ ನಾಯಕ ಯಾರು ಗೊತ್ತಾ?
ಹಾಸನ : ಹುಲಿಯಾ ಮತ್ತು ಬಂಡೆ ಝೂನಲ್ಲಿ ಇರಲಷ್ಟೆ ಯೋಗ್ಯರು ; ಮಾನವ ಸಮಾಜದಲ್ಲಿ ಇರಲು ಅರ್ಹತೆ ಅವರಿಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ . ಕೆ . ಶಿವಕುಮಾರ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ .
ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಗೆ ಭಾಗವಹಿಸುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ನ ಆರೋಪಕ್ಕೆ ತಿರುಗೇಟು ನೀಡಿದ ಅವರು , ಆಡಳಿತದಲ್ಲಿ ತಪ್ಪಿದ್ದರೆ ವಿಧಾನಸೌಧದಲ್ಲಿ ಬಂದು ಪ್ರಸ್ತಾಪ ಮಾಡಿ .
ನಿಮಗೆ ಹಕ್ಕಿದೆ . ಬಹಳ ಪುರಾತನ ಇತಿಹಾಸ ಇರುವ ರಾಜಕೀಯ ಪಕ್ಷವಾಗಿ ಇಲ್ಲ ಸಲ್ಲದ ಹೇಳಿಕೆ ನೀಡುವ ಮೂಲಕ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ . ಕೋವಿಡ್ ಸಮಯದಲ್ಲಿ ಜನರಿಗೆ ಭಯ ಮೂಡಿಸುತ್ತಿದ್ದಾರೆ ಎಂದು ಕಿಡಿಕಾರಿದರು .
ರಾಜ್ಯ , ರಾಷ್ಟ್ರವನ್ನು ಸುದೀರ್ಘವಾಗಿ ಆಡಳಿತ ಮಾಡಿ ಇಂದು ವೆಂಟಿಲೇಟರ್ ಇಲ್ಲ ಸೌಲಭ್ಯ ಇಲ್ಲ ಅಂತಾರೆ . ಇಂದಿನ ಈ ಸ್ಥಿತಿಗೆ ಅವರೇ ಕಾರಣ . ನಿಮ್ಮ ಕಾಲದಲ್ಲಿ ಎಷ್ಟು ವೆಂಟಿಲೇಟರ್ ಬಂದವು ಎಲ್ಲಿ ಹೋದವು . ನಿಮ್ಮ ಆಡಳಿತದ ಕಾಲದಲ್ಲಿ ಡೆಂಗ್ಯೂ , ಹಾವು ಕಡಿತ , ಹುಚ್ಚು ನಾಯಿ ಕಡಿತಕ್ಕೆ ಔಷಧಿಯೇ ಬಂದಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು . ಇಂದಿರಾ ಕ್ಯಾಂಟೀನ್ ನಲ್ಲಿ ಏನೆಲ್ಲಾ ಮೋಸ ಆಗಿದೆ ಲೆಕ್ಕ ಕೊಡಿ . ನಿಮ್ಮ ಕಾಲದಲ್ಲಿ ವಸತಿ ಯೋಜನೆಯಲ್ಲಿ ಅಕ್ರಮ ನಡೆದಿಲ್ಲವೆ ಎಂದು ಆರೋಪಿಸಿದರು .