ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷದ ದೊಡ್ಡ ನಾಯಕರಾಗಿದ್ದರು. ಅವರು ಬರೋಬ್ಬರಿ 18 ವರ್ಷಗಳ ಕಾಲ ಪಕ್ಷ ಹಾಗು ಗಾಂಧಿ ಪರಿವಾರಕ್ಕೆ ನಿಕಟವಾಗಿದ್ದರು. ಅಷ್ಟೇ ಅಲ್ಲದೆ ರಾಹುಲ್ ಗಾಂಧಿಯವರ ಉತ್ತಮ ಸ್ನೇಹಿತರೂ ಆಗಿದ್ದರು. ಹೀಗಾಗಿ ಅವರು ಪಕ್ಷ ಬಿಟ್ಟಿರುವುದು ಕಾಂಗ್ರೆಸ್ ಪಕ್ಷಕ್ಕೆ ಭಾರೀ ನಷ್ಟವೆಂದೇ ಹೇಳಲಾಗಿತ್ತು. ಇದಕ್ಕೆ ಕಾರಣವೆಂದರೆ ಮಧ್ಯಪ್ರದೇಶದಲ್ಲಿ ಸಿಂಧಿಯಾ ಜನಪ್ರೀಯರಾಗಿದ್ದು ಅವರ ಸಮರ್ಥಕರ ಸಂಖ್ಯೆ ಬಹಳಷ್ಟಿದೆ.
ಜ್ಯೋತಿರಾಧಿತ್ಯ ಸಿಂಧಿಯಾ ಪಕ್ಷದಿಂದ ರಾಜೀನಾಮೆ ಕೊಟ್ಟು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಭಾರೀ ಹೊಡೆತ ಕೊಟ್ಟಿತ್ತು. ಸಿಂಧಿಯಾ ತಮ್ಮ ರಾಜೀನಾಮೆ ಪತ್ರವನ್ನ ಸೋನಿಯಾ ಗಾಂಧಿಯವರಿಗೆ ರವಾನಿಸಿಸಿ ಬಳಿಕ ಬಿಜೆಪಿಗೆ ಹೋಗಿದ್ದರು. ಬಳಿಕ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ ಪತನವಾಗಿತ್ತು. ಸಿಂಧಿಯಾ ಕೊಟ್ಟ ಶಾಕ್ ನಿಂದ ಹೊರಬರೋಕೂ ಮುನ್ನವೇ ಕಾಂಗ್ರೆಸ್ಸಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಉಪಚುನಾವಣೆಯ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಮಧ್ಯಪ್ರದೇಶದಲ್ಲಿ ಭರ್ಜರಿ ರಾಜಕೀಯದಾಟ ಶುರುವಾಗಿದೆ. ರಾಜಕೀಯ ಅಂಗಳದಲ್ಲಿ ಪರಸ್ಪರ ಗುದ್ದಾಡಲು ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ ರೀತಿಯ ತಂತ್ರಗಳನ್ನು ಅನುಸರಿಸುತ್ತ ತಮ್ಮ ದಾಳಿಗಳನ್ನ ಉರುಳಿಸುತ್ತಿವೆ. ಈ ಎಲ್ಲದರ ಮಧ್ಯೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ ಬಿಜೆಪಿ ದೊಡ್ಡ ಆಘಾತ ನೀಡಿದೆ.
ಕರೋನಾ ಸಾಂಕ್ರಾಮಿಕದ ಮಧ್ಯೆ, ಸೋಮವಾರ, ಮಧ್ಯಪ್ರದೇಶದ ಬಿಜೆಪಿ ಕಾಂಗ್ರೆಸ್‌ಗೆ ದೊಡ್ಡ ಆಘಾತವನ್ನು ನೀಡಿದೆ, ಸೋಮವಾರದಂದು ಕಾಂಗ್ರೆಸ್‌ನ 6 ಘಟಾನುಘಟಿ ನಾಯಕರು ತುಳಸಿ ಹಾಗು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಈ ಎಲ್ಲಾ ನಾಯಕರು ಭೋಪಾಲ್‌ನಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯುವ ಮೂಲಕ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ ಗೆ ಆಘಾತ ನೀಡುವಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಪ್ತ ಮತ್ತು ಜಲಸಂಪನ್ಮೂಲ ಸಚಿವ ತುಳಸಿ ಸಿಲಾವತ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಬಿಜೆಪಿ ಸೇರ್ಪಡೆಯಾದ ಪ್ರಮುಖ ನಾಯಕರು ಯಾರು?
ಭಾರತ್ ಸಿಂಗ್ ಚೌಹಾನ್, ದಿಲೀಪ್ ಚೌಧರಿ, ನಾಗ್ಜಿರಾಮ್ ಠಾಕೂರ್, ಹುಕಮ್ ಸಿಂಗ್ ಸಂಘನ್, ಓಂ ಸೇಠ್ ಮತ್ತು ಹುಕಂ ಸಿಂಗ್ ಪಟೇಲ್ ಬಿಜೆಪಿಗೆ ಸೇರಿದ್ದಾರೆ. ಈ ಸಂದರ್ಭದಲ್ಲಿ ಭೋಪಾಲ್‌ನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಮತ್ತು ರಾಜ್ಯ ಅಧ್ಯಕ್ಷ ವಿ.ಡಿ.ಶರ್ಮಾ ಉಪಸ್ಥಿತರಿದ್ದರು. ಸಚಿವ ತುಳಸಿ ಸಿಲಾವತ್ ಅವರೊಂದಿಗೆ ಎಲ್ಲಾ ನಾಯಕರು ಬಿಜೆಪಿ ಕಚೇರಿಗೆ ತಲುಪಿದ್ದರು.
ಉಪಚುನಾವಣೆಗೆ ಮುನ್ನ ಸಿಂಧಿಯಾ ಟೀಂ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಬಹುದು ಎಂದು ನಂಬಲಾಗಿದೆ. ಇನ್ನೂ ಹೆಚ್ಚಿನ ಹಿರಿಯ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರುತ್ತಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನ ತೊರೆದು ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾಗಿದ್ದರು. ಅವರ ಜೊತೆ 20 ಕಾಂಗ್ರೆಸ್ ಶಾಸಕರೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ಧರಿಂದ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತುಪಡಿಸಲಾಗದೆ ಪತನಗೊಂಡಿತ್ತು. ಬಳಿಕ ಬಹುಮತ ಸಾಬೀತುಪಡಿಸಿ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿದ್ದರು. ಈಗ ರಾಜೀನಾಮೆ ಕೊಟ್ಟಿದ್ದ ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಇನ್ನೇನು ಘೋಷಣೆಯಾಗಬೇಕಿರುವ ಹೊತ್ತಲ್ಲಿ ಮತ್ತೆ ಆರು ಕಾಂಗ್ರೆಸ್ ನಾಯಕರು ಈಗ ಬಿಜೆಪಿ ಸೇರ್ಪಡೆಯಾಗಿದ್ದಾರೆ.
Comments
Post a Comment