ಒಂದು ಪರಿವಾರ ಪ್ರಧಾನಿ ಮೋದಿ ಅವರ ತೇಜಸ್ಸನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ ಅವರು ಯಾರು ಗೊತ್ತಾ?

ನವದೆಹಲಿ: ಪ್ರಧಾನಿ ಮೋದಿ ಅವರ ಸ್ಟ್ರಾಂಗ್‌ಮ್ಯಾನ್‌ ಚಿತ್ರಣದಿಂದ ಭಾರತಕ್ಕೆ ಅಪಾಯ ಹೆಚ್ಚಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಂಧಿ ಅವರ ಆರೋಪಕ್ಕೆ ಬಿಜೆಪಿ ಸೂಕ್ತ ತಿರುಗೇಟು ನೀಡಿದೆ.
ಒಂದು ಪರಿವಾರ ಪ್ರಧಾನಿ ಮೋದಿ ಅವರ ವರ್ಚಸ್ಸನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಗಾಂಧಿ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭಾರತವೂ ಸೇರಿದಂತೆ ಇಡೀ ವಿಶ್ವ ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿದೆ. ಆದರೆ ಒಂದು ಪರಿವಾರ ಮಾತ್ರ ಮೋದಿ ಅವರ ಈ ವರ್ಚಸ್ಸನ್ನು ನಾಶ ಮಾಡಲು ಹವಣಿಸುತ್ತಿದೆ ಎಂದು ಜೆಪಿ ನಡ್ಡಾ ಕಿಡಿಕಾರಿದ್ದಾರೆ.
JP Nadda
ಕಾಂಗ್ರೆಸ್ ಹಾಗೂ ಗಾಂಧಿ ಪರಿವಾರ ದೇಶ ರಕ್ಷಣೆಯ ಸೂಕ್ಷ್ಮ ವಿಷಯಗಳನ್ನು ಬಹಿರಂಗವಾಗಿ ಮಾತನಾಡುವ ಮೂಲಕ ದೇಶದ ವಿದೇಶಾಂಗ ನೀತಿಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದು ನಡ್ಡಾ ಗಂಭೀರ ಆರೋಪ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರ ಜಾಗತಿಕ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದಲೇ ರಾಹುಲ್ ಗಾಂಧಿ, ಭಾರತ-ಚೀನಾ ಗಡಿ ಘರ್ಷಣೆಯನ್ನು ಸಾರ್ವಜನಿಕವಾಗಿ ಉಲ್ಲೇಖಿಸುತ್ತಿದ್ದಾರೆ ಎಂದು ನಡ್ಡಾ ಹರಿಹಾಯ್ದಿದ್ದಾರೆ.