ಇದೀಗ ಬಂದ ಸುದ್ದಿ:ಬಿಜೆಪಿ ಶಾಸಕನ ಸಾವಿನಲ್ಲಿ ಬಿಗ್ ಟ್ವಿಸ್ಟ್ ಆತ್ಮಹತ್ಯೆಗೆ ಕಾರಣರಾದವರ ಹೆಸರು ಬರೆದಿಟ್ಟ ಬಿಜೆಪಿ ಶಾಸಕ.

ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ದೇಬೇಂದ್ರನಾಥ್ ರೇ ಅವರು ಇಂದು ನಸುಕಿನ ವೇಳೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದು ಆತ್ಮಹತ್ಯೆಯಲ್ಲಿ, ಕೊಲೆ ಎಂಬ ಶಂಕೆ ವ್ಯಕ್ತವಾಗಿತ್ತು.
ಆದರೆ ಇದೀಗ ಈ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಇದು ಆತ್ಮಹತ್ಯೆಯೇ ಎಂಬುದು ಪೊಲೀಸರ ವಾದ. ಏಕೆಂದರೆ ಪೊಲೀಸರು ಹೇಳುವಂತೆ ದೇಬೇಂದ್ರನಾಥ್ ಅವರು ಧರಿಸಿದ್ದ ಶರ್ಟ್ ಜೇಬಿನಲ್ಲಿ ಡೆತ್ ನೋಟ್ ಲಭ್ಯವಾಗಿದೆಯಂತೆ!
ಇದರಲ್ಲಿ ಏನು ಬರೆಯಲಾಗಿದೆ ಎಂಬ ಬಗ್ಗೆ ಈಗಾಗಲೇ ಬಹಿರಂಗಗೊಳಿಸುವುದಿಲ್ಲ ಎಂದಿರುವ ಪೊಲೀಸರು, ತಮ್ಮ ಸಾವಿಗೆ ಮೂರು ಮಂದಿ ಕಾರಣ ಎಂದು ಅದರಲ್ಲಿ ಬರೆಯಲಾಗಿದೆ ಎಂದಿದ್ದಾರೆ. ಆದರೆ ಆ ಹೆಸರುಗಳು ಯಾವುವು ಎಂಬ ಮಾಹಿತಿಯನ್ನು ಅವರು ತಿಳಿಸಿಲ್ಲ.
ನೇಣು ಬಿಗಿದುಕೊಂಡಿರುವ ಜಾಗದಲ್ಲಿ ಹೆಚ್ಚಿನ ತನಿಖೆಗೆಂದು ಪೊಲೀಸರು ಶ್ವಾನವನ್ನು ಕರೆತಂದು ಪರಿಶೀಲನೆ ಮಾಡುತ್ತಿದ್ದಾರೆ. ಜತೆಗೆ, ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ಭೇಟಿ ನೀಡಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಏನಿದು ಪ್ರಕರಣ?: ಈ ಲಿಂಕ್‌ ನೋಡಿ: ವಾಪಸ್‌ ಬರುವೆ ಎಂದಿದ್ದ ಬಿಜೆಪಿ ಶಾಸಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!
ಸದ್ಯಕ್ಕೆ ಇದು ಕೊಲೆನಾ ಅಥವಾ ಆತ್ಮಹತ್ಯೆನಾ ಎಂಬುದು ಸ್ಪಷ್ಟವಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮಾಹಿತಿ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದು ರಾಯಗಂಜ್ ಎಸ್ಪಿ ಸುಮಿತ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ದೇಬೇಂದ್ರ ನಾಥ್ ರೇ ಇದು ಕೊಲೆ ಎಂದಿದ್ದಾರೆ.

Comments