ಇದೀಗ ಬಂದ ಸುದ್ದಿ:ಚೀನಾ ಕಂಪನಿಗಳಿಂದ ಸೈಬರ್ ದಾಳಿ!ಜನರಿಗೆ ಎಚ್ಚರಿಸಿದ ದೂರಸಂಪರ್ಕ ಇಲಾಖೆ.

ನವದೆಹಲಿ: ಚೀನಾ ಮೂಲದ ಕಂಪನಿಗಳಿಂದ ಸೈಬರ್‌ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ದೂರಸಂಪರ್ಕ ಇಲಾಖೆ ಎಚ್ಚರಿಸಿದೆ. ಹೀಗಾಗಿ ತಮ್ಮ ವೆಬ್‌ಸೈಟ್‌ ಹಾಗೂ ವೆಬ್‌ಪೋರ್ಟಲ್‌ಗಳ ಸುರಕ್ಷತೆಯನ್ನು ಹೆಚ್ಚಿಸುವಂತೆ ತನ್ನ ಅಧೀನದ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದೆ.
ತಾನು ನೀಡಿದ ಸೂಚನೆಯನ್ವಯ ಕೈಗೊಂಡ ಸುರಕ್ಷತಾ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆಯೂ ಇಲಾಖೆ ಸೂಚನೆ ನೀಡಿದೆ.