ಇದೀಗ ಬಂದ ಸುದ್ದಿ:ಸಿದ್ದುಗೆ ಬಹುದೊಡ್ಡ ಹೊಡೆತ!ಹೈಕೋರ್ಟ್ ನಿಂದ ಬಂದ ಆದೇಶವಾದರೂ ಏನು

ಬೆಂಗಳೂರು: ಕುರುಬರ ಸಂಘಕ್ಕೆ ಹೊಸದಾಗಿ ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಹೊಸದಾಗಿ ಚುನಾವಣೆ ನಡೆಸುವಂತೆ ಏಕ ಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ವಿಭಾಗೀಯ ನ್ಯಾಯಪೀಠ ರದ್ದು ಮಾಡಿತು. ಜೊತೆಗೆ ಮೂಲ‌ ಅರ್ಜಿದಾರರು ಎತ್ತಿರುವ ಅಂಶಗಳನ್ನು ಕುರಿತು ಹೊಸದಾಗಿ ವಿಚಾರಣೆ ನಡೆಸಲು ಸೂಚನೆ ನೀಡಿತು.
ಏಕಸದಸ್ಯ ಪೀಠಕ್ಕೆ ವಿಭಾಗೀಯ ಪೀಠದ ಸೂಚನೆಗಳು ಹೀಗಿವೆ..
  • ಪ್ರಕರಣವನ್ನು ಹೊಸದಾಗಿ ವಿಚಾರಣೆ ಮಾಡಬೇಕು
  • ಸಂಘದಲ್ಲಿ ನಡೆದಿರುವ ಅವ್ಯವಹಾರಗಳ ವಿಚಾರಣೆ
  • ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿರುವುದು
  • ಕಾನೂನು ಪ್ರಕಾರ ಆದೇಶ ಪಾಲಿಸುವಂತೆ ವಿಭಾಗೀಯ ನ್ಯಾಯಪೀಠ ಸೂಚನೆ
  • ಏಕ ಸದಸ್ಯ ನ್ಯಾಯಪೀಠಕ್ಕೆ ನಿರ್ದೇಶನ ನೀಡಿದ ವಿಭಾಗೀಯ ನ್ಯಾಯಪೀಠ ಪೀಠ
ಪ್ರಕರಣದ ಹಿನ್ನೆಲೆ
ಜೂನ್ ತಿಂಗಳ 26 ನೇ ತಾರೀಖಿನಂದು ಕುರುಬರ ಸಂಘದ ಚುನಾವಣೆ ನಡೆದಿತ್ತು. ಸಿದ್ದರಾಮಯ್ಯ ಮತ್ತು ಕೆ.ಎಸ್ ಈಶ್ವರಪ್ಪ ಬಣದ ನಡುವೆ ಪೈಪೋಟಿ ಏರ್ಪಟ್ಟಿತ್ತು. ಈ ವೇಳೆ ಈಶ್ವರಪ್ಪ ಬಣ ಹೀನಾಯ ಸೋಲಿಗೆ ಶರಣಾಗಿತ್ತು. ಇದನ್ನ ಪ್ರಶ್ನಿಸಿ ಹೈಕೋರ್ಟ್ ‌ಮರಟ್ಟಿಲೇರಲಾಗಿತ್ತು. ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಹೊಸದಾಗಿ ಚುನಾವಣೆ ನಡೆಸಲು ಆದೇಶ ಮಾಡಿತ್ತು. ಈಗ ಆ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿದೆ.