ಇದೀಗ ಬಂದ ಸುದ್ದಿ: ಸಿದ್ದರಾಮಯ್ಯಗೆ ಬಿಜೆಪಿಯಿಂದ‌ ಲೀಗಲ್ ನೋಟಿಸ್‌, ಅದನ್ನು ನೋಡಿ ಬೆಚ್ಚಿಬಿದ್ದ ಸಿದ್ದು,ಇದಕ್ಕೆ ಕಾರಣವೇನು ಗೊತ್ತಾ??

ಬೆಂಗಳೂರು: ಕೋವಿಡ್‌ ಭ್ರಷ್ಟಾಚಾರದ ವಿಚಾರವಾಗಿ ಆರೋಪ ಮಾಡಿರುವ ಕಾರಣಕ್ಕಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿಯಿಂದ ಲೀಗಲ್‌ ನೋಟಿಸ್‌ ಜಾರಿಗೊಳಿಸಿರುವುದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ನಾವು ಆರೋಪ ಮಾಡಿದ್ದು ಸರ್ಕಾರದ ವಿರುದ್ದವಾಗಿದ್ದು, ಉತ್ತರ ಕೊಡಬೇಕಾಗಿದ್ದು ಸರ್ಕಾರವೇ ಹೊರತು ಇನ್ಯಾರೋ ಪಕ್ಷದವರಲ್ಲ ಎಂದಿದ್ದಾರೆ.

ಲೀಗಲ್ ನೋಟಿಸ್‌ ನೀಡುವ ಮೂಲಕ ನಮ್ಮ ಬಾಯಿ ಮುಚ್ಚಿಸುತ್ತೇವೆ ಅಂದುಕೊಂಡರೆ ಅದು ಭ್ರಮೆಮಾತ್ರ, ಇಂತಹ ಲೀಗಲ್ ನೋಟಿಸ್‌ಗಳಿಗೆಲ್ಲಾ ನಾವು ಹೆದರೋದಿಲ್ಲ, ನಮಗೂ ಕಾನೂನು ಹೋರಾಟ ಮಾಡುವುದಕ್ಕೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ವಿಚಾರದಲ್ಲಿ ಸಂಪೂರ್ಣ ರಾಜಕೀಯ ದುರುದ್ದೇಶವೇ ಕಾಣಿಸುತ್ತಿದೆ. ಆರೋಪ ಮಾಡಿದ್ದಕ್ಕಾಗಿ ನಮಗೆ ‌ಲೀಗಲ್ ನೋಟಿಸ್‌ ಕೊಟ್ಟಿದ್ದಾರಲ್ಲ, ನಾವು ನ್ಯಾಯಾಲಯಕ್ಕೆ ದಾಖಲೆಗಳನ್ನು ನೀಡುತ್ತೇವೆ, ನ್ಯಾಯಾಲಯದಲ್ಲೇ ಅವರು ಉತ್ತರ ಕೊಡಲಿ ಎಂದರು.

ಕೋವಿಡ್‌ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಿದ್ದರು. ದಾಖಲೆ ಸಹಿತ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎನ್‌ ಸೂಚನೆಯಂತೆ ಲೀಗಲ್‌ ನೋಟಿಸ್‌ ಜಾರಿಗೊಳಿಸಲಾಗಿದೆ.