ನವದೆಹಲಿ: ಮೇಡ್ ಇನ್ ಚೈನಾ ವೈರಸ್ ಕೊರೋನಾ ಕುರಿತಂತೆ ಅಮೆರಿಕಾ ಮೊದಲಿನಿಂದಲೂ ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಕಿಡಿ ಕಾರುತ್ತಲೇ ಬಂದಿತ್ತು. WHO ಚೀನಾ ಪರವಾಗಿ ನಿಂತಿದೆ ಎಂದು ಡೋನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಿದ್ದರು. ಜೊತೆಗೆ ಡಬ್ಲ್ಯುಎಚ್ಒದ ಚೀನಾ ಪರ ಮೃದು ನೀತಿಯನ್ನು ಪ್ರಶ್ನಿಸಿದ್ದ ಅವರು ಅನುದಾನವನ್ನು ತಡೆ ಹಿಡಿದಿದ್ದರು.
ಆದರೆ ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ಚೀನಾ ಸಾಚಾ ಅನ್ನುವಂತೆ ವಾದಿಸುತ್ತಲೇ ಬಂದಿತ್ತು. ಆದರೆ ಇದೀಗ WHO ತನ್ನ ವರಸೆ ಬದಲಾಯಿಸಿದೆ, ಕೋವಿಡ್ 19 ಸೋಂಕಿನ ಕುರಿತಾಗಿ ಪ್ರಾಥಮಿಕ ಹಂತದಲ್ಲೇ ಚೀನಾ ಮಾಹಿತಿ ನೀಡಿರಲಿಲ್ಲ ಎಂದು ಮಾಹಿತಿ ತಿದ್ದುಪಡಿ ಮಾಡುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ಯು ಟರ್ನ್ ಹೊಡೆದಿದೆ.
ಚೀನಾ ಮಾಹಿತಿ ಒದಗಿಸಿತ್ತು ಎಂದೇ ಹೇಳುತ್ತಾ ಬಂದಿದ್ದ WHO ವರ್ತನೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಜೊತೆಗೆ WHO ನಂಬಿಕೆ ಆರ್ಹವೇ ಅನ್ನುವ ಪ್ರಶ್ನೆಯನ್ನು ಎತ್ತುವಂತೆ ಮಾಡಿದೆ.
ಈಗ WHO ವರಸೆ ಬದಲಾಗಿರುವುದನ್ನು ನೋಡಿದರೆ ಟ್ರಂಪ್ ಆರೋಪ ಸತ್ಯ ಎಂದಾಯ್ತು, ಜೊತೆಗೆ ಚೀನಾ ಪಿತೂರಿಗೆ ಪುಷ್ಟಿ ಸಿಕ್ಕಂತಾಗಿದೆ.
Comments
Post a Comment