ಕಾಂಗ್ರೆಸ್ ಬೆಚ್ಚಿಬೀಳುವಂತಹ ಹೇಳಿಕೆಯ ಮೂಲಕ ತಿರುಗೇಟು ನೀಡಿದ ಬಿಜೆಪಿಯ ಓರ್ವ ನಾಯಕ!!!

ಕಾಂಗ್ರೆಸ್ ಬೆಚ್ಚಿಬೀಳುವಂತಹ ಹೇಳಿಕೆಯ ಮೂಲಕ ತಿರುಗೇಟು ನೀಡಿದ ಬಿಜೆಪಿಯ ಓರ್ವ ನಾಯಕ!!! ಡಿ.ಜೆ.ಹಳ್ಳಿ,ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಕಾಂಗ್ರೆಸ್ ಪಾಪದ ಕೂಸು. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಲು ಕಾಂಗ್ರೆಸ್​ ನಾಯಕರೇ ಕಾರಣ. ಘಟನೆಯಲ್ಲಿ ರಾಜಕೀಯ ಮೇಲಾಟಗಳು ನಡೆಯುತ್ತಿದೆ. ಕಾಂಗ್ರೆಸ್ ಹಾಗೂ ಅಲ್ಲಿನ ಸಂಘಟನೆಗಳ ಮಧ್ಯೆ ರಾಜಕೀಯ ಇದೆ. ಬಿಜೆಪಿಗೂ ಈ ಘಟನೆಗೆ ಯಾವುದೇ ಸಂಬಂಧವಿಲ್ಲ. ಇದರಲ್ಲಿ ಬಿಜೆಪಿಯವರು ಯಾವುದೇ ರಾಜಕೀಯ ಮಾಡುತ್ತಿಲ್ಲ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿಂದು ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿ ವ ಜಮೀರ್ ಅಹ್ಮದ್ ಖಾನ್​ ಬೆಂಕಿ ಬಿದ್ದ ಮನೆಗೆ ಹೋಗಿ ಸಾಂತ್ವನ ಹೇಳಲಿಲ್ಲಿ. ಬದಲಾಗಿ ಬೆಂಕಿ ಹಾಕಿದವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ. ಪಾದರಾಯ ನಪುರ ಗಲಾಟೆಯಲ್ಲಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದವರನ್ನ ಮಾಲೆ ಹಾಕಿ ಸ್ವಾಗತಿ ಸಿದರು.ಇವರೇನು ಸ್ವಾತಂತ್ರ್ಯ ಹೋರಾಟ ಮಾಡಲು ಜೈಲಿಗೆ ಹೋಗಿದ್ರಾ(?) ಎಂದು ಅವರು ಜಮೀರ್ ಅಹಮದ್ ಗೆ ಪ್ರಶ್ನೆ ಮಾಡಿದ್ದಾರೆ.

ಸಿಎಎ ಹಾಗೂ ಸಂವಿಧಾನ ಕಲಂ 370 ರದ್ದತಿ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಮಾಡಿದ ಪ್ರಚೋದನಾ ಕಾರಿ ಭಾಷಣ ಬಿಸಿ ಕೆಂಡವಾಗಿದೆ. ಅದನ್ನು ಹಾರಿಸುವ ಗೋಜಿಗೆ ಯಾರು ಹೋಗಿಲ್ಲ. ಅದೇ ಕೆಂಡವನ್ನು ಹಿಡಿದು ಕೊಂಡು ಕಾಂಗ್ರೆಸ್​ನವರು ಮತ್ತೆ ರಾಜಕೀಯ ಮಾಡುವ ಪ್ರಯತ್ನ ನಡೆಯುತ್ತದೆ. ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿಯಲ್ಲಿನ ಗಲಭೆಗೆ ಅಲ್ಲಿನ ಪರಿಸ್ಥಿತಿಯೂ ಕಾರಣವಾಗಿದೆ.

ಮಕ್ಕಳಿಗೆ ಸರಿಯಾದ ಶಿಕ್ಷಣವಿಲ್ಲ. ಪ್ರಾಪಂಚಿಕ ವಿಚಾರ ಗಳ ಬಗ್ಗೆ ಅರಿವಿಲ್ಲ ಹೀಗಾಗಿ ತಾವು ಸಚಿವರಾಗಿದ್ದಾ ಅಲ್ಲಿ ಶಾಲೆಗಳನ್ನು ತೆರೆದು ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದೇವೆ. ಮಕ್ಕಳಿಗೆ ಇಸ್ಕಾನ್ ವತಿಯಿಂದ ಮಧ್ಯಾಹ್ನದ ಬಿಸಿಯೂಟ ನೀಡಲಾಗಿದೆ. ಆಮೂಲಕ ಕಲಿಕೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ನಾವು ಅಂದು ಮಾಡಿದ್ದೆವು ಎಂದು ಅವರು ಹಿಂದಿನ ಘಟನೆಗಳನ್ನು ಸ್ಮರಿಸಿದರು.



Comments