ರಾಮ ಮಂದಿರಕ್ಕೆ ಶಿಲಾನ್ಯಾಸ: ಇಡೀ ಕಾರ್ಯಕ್ರಮ ಕೈಮುಗಿದು ವೀಕ್ಷಿಸಿ ಈ ರೀತಿ ಹೇಳಿದ ಮೋದಿ ತಾಯಿ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 5 ರಂದು ಭವ್ಯ ರಾಮ ಮಂದಿರಕ್ಕಾಗಿ ಭೂಮಿಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿದ್ದಾರೆ. ಹೀಗಿರುವಾಗ ಪಿಎಂ ಮೋದಿ ತಾಯಿ ಹೀರಾಬೆನ್ ಗಾಂಧೀನಗರದ ತಮ್ಮ ನಿವಾಸದಲ್ಲಿ ಟಿವಿ ಮೂಲಕ ಈ ಇಡೀ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಇಡೀ ಕಾರ್ಯಕ್ರಮವನ್ನು ಕೈಮುಗಿದುಕೊಂಡೇ ವೀಕ್ಷಿಸಿದ್ದಾರೆನ್ನಲಾಗಿದೆ.

ಸದ್ಯ ಮೋದಿ ತಾಯಿ ಹೀರಾಬೆನ್ ಕಾರ್ಯಕ್ರಮವನ್ನು ಟಿವಿ ಮೂಲಕ ವೀಕ್ಷಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಗಳಲ್ಲೂ ಅವರು ಹನುಮಾನ್‌ ಗಢಿಯಲ್ಲಿ ಪಿಎಂ ಮೋದಿ ವಿಶೇಷ ಪೂಜೆ ನೆರವೇರಿಸುತ್ತಿರುವ ಹಾಗೂ ಭೂಮಿ ಪೂಜೆ ನಡೆಸುತ್ತಿರುವಾಗ ಭಕ್ತಿಯಿಂದ ಕೈಮುಗಿದು ಕುಳಿತು ವೀಕ್ಷಿಸುತ್ತಿರುವುದನ್ನು ನೋಡಬಹುದಾಗಿದೆ. ಹೀರಾಬೆನ್ ತಮ್ಮ ಕಿರಿಯ ಪುತ್ರ ಪಂಕಜ್ ಮೋದಿ ಜೊತೆಗಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಸುವ ಮೂಲಕ ಮೂರು ದಾಖಲೆಗಳನ್ನು ಬರೆದಿದ್ದಾರೆ.
* ಮೊದಲನೆಯದಾಗಿ 10ನೇ ಶತಮಾನದ ಹನುಮಾನ್ ಗಡಿ ದೇಗುಲಕ್ಕೆ ತೆರಳಿದ ಮೊದಲ ಪ್ರಧಾನಿ 
* ರಾಮ ಜನ್ಮಭೂಮಿ ಅಯೋಧ್ಯೆಗೆ ಭೇಟಿ ನೀಡಿದ ಮೊದಲ ಪ್ರಧಾನಿ. 
* ದೇವಾಲಯವೊಂದರ ಭೂಮಿ ಪೂಜೆನೆರವೇರಿಸಿದ ಮೊದಲ ಪ್ರಧಾನಿ ...


Comments