ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಕೋವಿಡ್ 19 ಉಪಕರಣ ಖರೀದಿ ಸಂಬಂಧದ ಅಕ್ರಮದ ಆರೋಪದ ವಿಚಾರದಲ್ಲಿ ನೇರವಾಗಿ ಬಿಜೆಪಿಗೆ ಸವಾಲು ಹಾಕಿದ್ದಾರೆ.
"ಮೊದಲು ನ್ಯಾಯಾಲಯಕ್ಕೆ ಬಂದು ಪ್ರಧಾನಿ ಮೋದಿ ಪಿಎಂ ಕೇರ್ ನಿಧಿಯ ಲೆಕ್ಕವನ್ನು ಕೊಡಲಿ" ಎಂದು ಸವಾಲು ಹಾಕಿರುವ ಜಯಚಂದ್ರ, "ಬಿಜೆಪಿಯವರು ನೊಟೀಸ್ ಕೊಟ್ಟರೆ ನಾವೇನೂ ಭಯ ಪಡುತ್ತೇವಾ"ಎಂದು ಪ್ರಶ್ನಿಸಿದ್ದಾರೆ.
"ಬಿಜೆಪಿಯವರು ನೊಟೀಸ್ ಕೊಟ್ಟು ನಮ್ಮ ಬಾಯನ್ನು ಮುಚ್ಚಿಸಬಹುದು ಎನ್ನುವ ಕನಸನ್ನು ಕಾಣುವುದು ಬೇಡ. ಅವರಿಗೆ ಗಂಡಸ್ತನವಿದ್ದರೆ, ನ್ಯಾಯಾಲಯಕ್ಕೆ ಹೋಗಲಿ"ಎಂದು ಜಯಚಂದ್ರ ಹೇಳಿದರು.
"ಕೋವಿಡ್ ಉಪಕರಣ ಖರೀದಿಯಲ್ಲಿ ಏನೆಲ್ಲಾ ಅವ್ಯವಹಾರ ನಡೆದಿದೆ ಎನ್ನುವುದನ್ನು ನಾವು ದಾಖಲೆ ಸಮೇತ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ. ಬಿಜೆಪಿಯ ಎಲ್ಲಾ ಅಕ್ರಮಗಳನ್ನು ಕೋರ್ಟಿನಲ್ಲಿ ಸಾಬೀತು ಪಡಿಸುತ್ತೇವೆ"ಎಂದು ಜಯಚಂದ್ರ, ಸರಕಾರದ ವಿರುದ್ದ ಕೆಂಡಾಮಂಡಲವಾಗಿದ್ದಾರೆ.
"ನಮ್ಮ ಪ್ರಶ್ನೆಗಳಿಗೆ ಉತ್ತರವಿಲ್ಲದೇ ಬಿಜೆಪಿಯವರು ನೊಟೀಸ್ ನೀಡಿದ್ದಾರೆ. ತಪ್ಪು ಮಾಡಿಲ್ಲಾ ಎಂದಾದರೆ, ನ್ಯಾಯಾಲಯಕ್ಕೆ ಹೋಗುವುದನ್ನು ಬಿಟ್ಟು, ನೊಟೀಸ್ ಕೊಟ್ಟರೆ ನಾವು ಭಯ ಪಡುತ್ತೇವಾ"ಎಂದು ಟಿ.ಬಿ.ಜಯಚಂದ್ರ ಸವಾಲು ಹಾಕಿದ್ದಾರೆ.
"ಅಕ್ರಮ ಪ್ರಶ್ನಿಸಿದ ನಮಗೆ ವಕೀಲರ ಮೂಲಕ ನೋಟೀಸ್ ಕೊಟ್ಟು @BJP4Karnataka ನಮ್ಮ ಕೆಲಸವನ್ನು ಸುಲಭ ಮಾಡಿದೆ. ನಾವೇ ನ್ಯಾಯಾಲಯದ ಮೆಟ್ಟಿಲು ಹತ್ತಬೇಕೆಂದಿದ್ದೆವು. ನಮಗೆ ನೀಡದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲೇ ಬೇಕಲ್ಲಾ? ಕೋರ್ಟ್ ನಲ್ಲಿಯಾದರೂ ನಮ್ಮನ್ನು ಎದುರಿಸಲೇ ಬೇಕಲ್ಲಾ?"ಎಂದು ಸಿದ್ದರಾಮಯ್ಯ ಕೂಡಾ ಟ್ವೀಟ್ ಮಾಡಿದ್ದರು.

Comments
Post a Comment