ಲಕ್ನೋ, ಆ 2: ದೇವಾಲಯಗಳ ನಗರಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಬುಧವಾರ, ಆಗಸ್ಟ್ ಐದರಂದು ಈ ಕಾರ್ಯಕ್ರಮ ನಡೆಯಲಿದೆ.
ಶ್ರೀರಾಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಯಾರೆನ್ನೆಲ್ಲಾ ಆಹ್ವಾನಿಸಿದೆ ಎನ್ನುವ ವಿಚಾರದಲ್ಲಿ ಇನ್ನೂ ಗೊಂದಲಗಳಿವೆ. ರಾಮ ಮಂದಿರ ಚಳುವಳಿಯ ಪ್ರಮುಖ ರೂವಾರಿಗಳಾದ ಆಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಇನ್ನು, ವಿರೋಧ ಪಕ್ಷದ ನಾಯಕರು, ಅಯೋಧ್ಯೆ ತೀರ್ಪು ನೀಡಿದ ಮಾಜಿ ಸಿಜೆಐ, ರಾಜ್ಯಸಭಾ ಸದಸ್ಯ ರಂಜನ್ ಗೊಗೊಯ್, ಬಿಜೆಪಿ ಮುಖಂಡರಾದ ಸುಬ್ರಮಣಿಯನ್ ಸ್ವಾಮಿ, ವಿವಿಧ ಧಾರ್ಮಿಕ / ಸಂಘಟನೆ ಮುಖಂಡರುಗಳಲ್ಲಿ, ಯಾರನ್ನೆಲ್ಲಾ ಆಹ್ವಾನಿಸಲಾಗಿದೆ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ.
ಉತ್ತರ ಪ್ರದೇಶದ ಸಿಎಂ ಹೊರತು ಪಡಿಸಿ ಯಾವದೇ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳನ್ನು ಭೂಮಿಪೂಜೆಗೆ ಆಹ್ವಾನಿಸುತ್ತಿಲ್ಲ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿರುವ (ಆಗಸ್ಟ್ 1ರಂತೆ) ಅತಿಥಿಗಳ ಪಟ್ಟಿ ಇಂತಿದೆ:
ಅಯೋಧ್ಯೆ ರಾಮ ಮಂದಿರ
ನರೇಂದ್ರ ಮೋದಿ
ಯೋಗಿ ಆದಿತ್ಯನಾಥ್
ಉಮಾಭಾರತಿ
ವಿನಯ್ ಕತಿಯಾರ್
ಸಾಧ್ವಿ ರಿತಾಂಬರ
ಕಲ್ಯಾಣ್ ಸಿಂಗ್
ಜೈಭಾನ್ ಸಿಂಗ್ ಪೊವಾಯಿಯಾ
ರಾಜನಾಥ್ ಸಿಂಗ್
ಆಗಸ್ಟ್ ಐದರಂದು ರಾಮ ಮಂದಿರ ಭೂಮಿಪೂಜೆ
ಅಮಿತ್ ಶಾ
ಎಲ್.ಕೆ ಆಡ್ವಾಣಿ
ಮುರಳಿ ಮನೋಹರ ಜೋಷಿ
ಮೋಹನ್ ಭಾಗವತ್
ಕೃಷ್ಣ ಗೋಪಾಲ
ಇಂದ್ರೇಶ್ ಕುಮಾರ್
ಬಾಬಾ ರಾಮದೇವ್
ಅನುಜ್ ಝಾ (ಡಿಸಿ, ಅಯೋಧ್ಯೆ)
ಅವನೀಶ್ ಕುಮಾರ್ ಅವಸ್ಥಿ (ಸಿಎಸ್, ಉ.ಪ್ರ ಸರಕಾರ)
ರಾಜೇಂದ್ರ ದೇವಾಚಾರ್ಯ ಸ್ವಾಮೀಜಿ
