ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆರ್ಥಿಕತೆಯನ್ನು ಪುನರ್ನಿರ್ಮಿಸುವ ಪ್ರಯತ್ನಗಳ ಭಾಗವಾಗಿ ಸ್ಥಳೀಯ ಉದ್ಯಮವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಕೇಂದ್ರ ಸರ್ಕಾರ ಬೃಹತ್ ಘೋಷಣೆಯನ್ನು ಮಾಡಲಿದೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸ್ವತಃ ಈ ಬಗ್ಗೆ ಘೋಷಣೆಯನ್ನು ಮಾಡಲಿದ್ದಾರೆ ಎನ್ನಲಾಗಿದ್ದು, ಉದ್ಯಮವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವ ಕ್ರಮವು ಆತ್ಮನಿರ್ಭಾರ ಭಾರತ್ ಅಭಿಯಾನ್ ಅಥವಾ ಸ್ವಾವಲಂಬನೆ ಅಭಿಯಾನದ ಭಾಗವಾಗಲಿದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದರು, ಅದರಂತೆ ಈಗ ಕೇಂದ್ರ ಸರ್ಕಾರದಿಂದ ಯಾವೆಲ್ಲ ಘೋಷಣೆ ಬರಲಿದೆ ಎನ್ನುವುದು ಕೂತುಹಲ ಮೂಡಿಸಿದೆ.ಕೇಂದ್ರ ಸರ್ಕಾರ ಘೋಷಣೆ ಮಾಡುವ ಪ್ಯಾಕೇಜ್ ಜಾಗತಿಕ ತಯಾರಕರ ಒಳಹರಿವು ಹೆಚ್ಚಿಸುವುದು ಹಾಗೂ ದೇಶದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಇದು ಸಹಾಯ ಮಾಡುತ್ತದೆ ಕೂಡ.

Comments
Post a Comment