ಕೊಪ್ಪಳ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಅವರು ಸಿದ್ದರಾಮಯ್ಯಯುವರು ಸಿಎಂ ಇದ್ದಾಗ ತಾವು ರಾಜ್ಯಕ್ಕೆ ಮುಖ್ಯಮಂತ್ರಿ ಎನ್ನುವಂತೆ ವರ್ತಿಸಿಲಿಲ್ಲ. ಜಾತ್ಯಾತೀತವಾಗಿ ಯೋಜನೆ ಜಾರಿ ಮಾಡಲಿಲ್ಲ. ಬದಲಾಗಿ ಓಲೈಕೆ ರಾಜಕೀಯ ಮಾಡಿದ್ದಾರೆ. ರಾಜ್ಯದಲ್ಲಿ ತಮ್ಮ ಆಡಳಿತ ಇದ್ದಾಗ ಕೋಮು ಗಲಭೆ ನಡೆದಾಗ ಆರೋಪಿಗಳ ವಿರುದ್ದ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅವರ ಈ ನಡೆ ಬೆಂಗಳೂರಿಗೆ ಗಲಭೆಗೆ ಕಾರಣವೆಂದು ಟೀಕಿಸಿದರು.
ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಹಿಂದೂಗಳ ಹತ್ಯೆ ನಡೆದಾಗ ಕ್ರಮಕೈಗೊಳ್ಳಲಿಲ್ಲ. ಹಾಗಂತ ನಾನು ಬೆಂಗಳೂರಿನಲ್ಲಿ ನಡೆದ ಗಲಭೆಗೆ ಸಿದ್ದರಾಮಯ್ಯ ನೇರ ಕಾರಣವೆಂದು ಹೇಳುವುದಿಲ್ಲ. ಅವರು ಸಿಎಂ ಇದ್ದಾಗ ಕ್ರಮಕೈಗೊಳ್ಳದಿರುವುದು ಈ ಜನರಿಗೆ ದೈರ್ಯ ಬಂದಿದೆ. ಕಾಂಗ್ರೆಸ್ ನ ಓಲೈಕೆ ರಾಜಕಾರಣದಿಂದ ಜನರು ಬೆಳೆಯುತ್ತಿದ್ದಾರೆ ಎಂದರು.
ಪೊಲೀಸರು,ಮಾಧ್ಯಮ ಹಾಗೂ ಸಾರ್ವಜನಿಕರಿಗೆ ಭಯ ಸೃಷ್ಟಿಸುತ್ತಿದ್ದಾರೆ. ಭಯ ಸೃಷ್ಟಿಸುತ್ತಿರುವ ಭಯೋತ್ಪಾದಕರ ಪರವಾಗಿ ನಿಲ್ಲುತ್ತೀರೋ.ಅಥವಾ ದಲಿತ,ಸಜ್ಜನ ಶಾಸಕರ ಪರವಾಗಿ ನಿಲ್ಲಿತ್ತೀರಾ ಅನ್ನೋದನ್ನ ಸಿದ್ದರಾಮಯ್ಯನವರೇ ಹೇಳಬೇಕು ಎಂದರು
ಹಿಂದುಸ್ತಾನ ಸಮಾಚಾರ/ವಿ.ಪಿ/ಎಮ್.ಎಸ್/ಯ.ಮ

Comments
Post a Comment