ಇದೀಗ ಬಂದ ಸುದ್ದಿ: ಉಪಚುನಾವಣೆಗೆ ಉಸ್ತುವಾರಿಗಳ ನೇಮಕ ಮಾಡಿದ ಕಮಲ ಪಕ್ಷ.!

ಫೆಬ್ರವರಿ 4: ಮುಂಬರುವ ಎರಡು ವಿಧಾನಸಭೆ ಹಾಗೂ ಒಂದು ಲೋಕಸಭೆ ಉಪ ಚುನಾವಣೆಗಾಗಿ ಉಸ್ತುವಾರಿಗಳನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು ಪ್ರಕಟಿಸಿದೆ. ಬಸವ ಕಲ್ಯಾಣ ಹಾಗೂ ಮಸ್ಕಿಯಲ್ಲಿ ವಿಧಾನಸಭೆ ಉಪ ಚುನಾವಣೆ ನಡೆಯಬೇಕಿದೆ. ಸಂಸದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ. ವೈ ವಿಜಯೇಂದ್ರ ಅವರು ಬಸವಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಅವರಿಗೆ ಮಸ್ಕಿ ಕ್ಷೇತ್ರ ಉಸ್ತುವಾರಿಯಾಗಿ ಜವಾಬ್ದಾರಿ ನೀಡಲಾಗಿದೆ.


ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಇಂದು ತೆರೆ | Oneindia Kannada


ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆ ಉಸ್ತುವಾರಿಗಳು:


ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ


ವಿ ಸೋಮಣ್ಣ, ಸಚಿವ


ಬಸವರಾಜ ಬೊಮ್ಮಾಯಿ, ಸಚಿವ


ಭಗವಂತ ಖೂಬಾ, ಸಚಿವ


ಮಾಲಿಕಯ್ಯ ಗುತ್ತೇದಾರ್, ರಾಜ್ಯ ಉಪಾಧ್ಯಕ್ಷ


ರಾಜಕುಮಾರ್ ಪಾಟೀಲ್ ತೇಲ್ಕರ್, ಶಾಸಕ, ವಿಭಾಗ ಪ್ರಭಾರಿ


ಈಶ್ವರ್ ಸಿಂಗ್ ಠಾಕೂರ್, ವಿಭಾಗ ಸಹ ಪ್ರಭಾರಿ


ಅಮರನಾಥ್ ಪಾಟೀಲ್, ರಾಜ್ಯ ಕಾರ್ಯಕಾರಿಣಿ ಸದಸ್ಯ


***


ಮಸ್ಕಿ ವಿಧಾನಸಭಾ ಉಪ ಚುನಾವಣೆ ಉಸ್ತುವಾರಿಗಳು:


ಶ್ರೀರಾಮುಲು, ಸಚಿವ


ಎನ್ ರವಿ ಕುಮಾರ್, ಎಂಎಲ್ಸಿ, ರಾಜ್ಯ ಪ್ರಧಾನ ಕಾರ್ಯದರ್ಶಿ


ಬಿ. ವೈ ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ


ನೇಮಿರಾಜ್ ನಾಯಕ್, ವಿಭಾಗ ಸಹ ಪ್ರಭಾರಿ


ನರಸಿಂಹ ನಾಯಕ್ (ರಾಜೂ ಗೌಡ), ಶಾಸಕ


ಶಿವರಾಜ್ ಪಾಟೀಲ್, ಶಾಸಕ


***


ಬೆಳಗಾವಿ ಲೋಕಸಭಾ ಉಪ ಚುನಾವಣೆ ಉಸ್ತುವಾರಿಗಳು:


ಜಗದೀಶ್ ಶೆಟ್ಟರ್, ಸಚಿವ


ಪ್ರಹ್ಲಾದ್ ಜೋಶೀ, ಕೇಂದ್ರ ಸಚಿವ


ಮಹೇಶ್ ಟೆಂಗಿನಕಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ


ರಮೇಶ್ ಜಾರಕಿಹೊಳೀ, ಸಚಿವ


ಉಮೇಶ್ ಕತ್ತಿ, ಸಚಿವ


ಶಶಿಕಲಾ ಜೊಲ್ಲೆ, ಸಚಿವ


ಬಸವರಾಜ್ ಯಂಕಂಚಿ, ವಿಭಾಗ ಸಹ ಪ್ರಭಾರಿ

Comments