ಇಸ್ಲಾಂನ ಪವಿತ್ರ ಗ್ರಂಥ ಕುರಾನ್ ಭ’ಯೋ’ತ್ಪಾ’ದನೆ ಉತ್ತೇಜಿಸುತ್ತದೆ ಎಂದು ವಾದಿಸಿ, ಕುರಾನಿನ ಕೆಲವು ಅ’ಯ’ತ್‌ಗಳನ್ನು ತೆಗೆದುಹಾಕುವಂತೆ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ವಾಸೀಂ ರಿಝ್ವಿ ವಿರುದ್ಧ ಮ”ಸ್ಲಿ’ಮರ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.
ಅಂಜ”ಮನ್ ಖು’ದ್ದಮ್ ಎ ರಸೂಲ್ ಕಾರ್ಯದರ್ಶಿ ಶಾನ್ ಅಹ್ಮದ್ ಮತ್ತು ಇತ್ತೇಹಾದ್ ಎ ಮಿಲ್ಲತ್ ಕೌನ್ಸಿಲ್ ಎಂಬ ಸಂಘಟನೆ ನೀಡಿರುವ ದೂರುಗಳನ್ನು ಆಧರಿಸಿ ಸೋಮವಾರ ಸಂಜೆ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಪಿಸಿಯ ಸೆಕ್ಷನ್ 295 ಎ (ಯಾವುದೇ ವರ್ಗದ, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ. ರಾಜಾ ಕ್ರಿಯಾ ಸಮಿತಿಯ ಅಧ್ಯಕ್ಷ ಮೌಲಾನಾ ಅಫ್ರೋಜ್ ರಾಜಾ ಖಾದ್ರಿ, ರಿಜ್ವಿಯ ಹಿಂದೆ ಪಂಥೀಯ ಶಕ್ತಿಗಳು ಕೆಲಸ ಮಾಡುತ್ತಿವೆ ಮತ್ತು ಅವುಗಳ ಮುಖವನ್ನು ತೆರೆದಿಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಮುಸ್ಲಿಂ ಸಮುದಾಯದ ಹಲವು ಮುಖಂಡರು ರಿಝ್ವಿ ವಿರುದ್ಧ ಭಾನುವಾರ ಲಕ್ನೋದಲ್ಲಿ ಪ್ರತಿಭಟನೆ ಕೂಡ ನಡೆಸಿದ್ದಾರೆ.
Comments
Post a Comment