ಎಂಬಿಎ ಬಿಟ್ಟು ಚಹಾ ಮಾರಾಟಕ್ಕಿಳಿದ ಯುವಕನ ಆದಾಯ ಕೇಳಿದ್ರೆ ಶಾಕ್ ಆಗ್ತೀರ, ಎಂಬಿಎ ವಿದ್ಯಾರ್ಥಿ ಚಾಯ್ ವಾಲಾ ಆಗಿದ್ದೇಗೆ.?
ಜೀವನದ ಸುಂದರ ಆಟವೆಂದರೆ ಅದೇ ಯಾವ ಸಂಧರ್ಭದಲ್ಲಿ ನಮ್ಮ ಬದುಕು ಯಾವ ದಿಕ್ಕಿಗೆ ತಿರುಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬದುಕು ಬದಲಾಯಿಸುವ ಆಟಗಳು ಜೀವನ ಹಾಗೂ ಗುರಿಯ ದಿಕ್ಕನ್ನು ಬದಲಾಯಿಸಬಹುದು ಎಂಬುದಕ್ಕೆ ಎಂಬಿಎ ವಿದ್ಯಾರ್ಥಿ ಚಾಯ್ ವಾಲ ಆದ ಯಶೋಗಾಥೆಯೇ ಸಾಕ್ಷಿ.
ಎಂಬಿಎ ವಿದ್ಯಾರ್ಥಿಯಾಗಿದ್ದ ಪ್ರಪುಲ್ ಬಿಲ್ಲೋರ್ ಹಣದ ಅವಶ್ಯಕತೆಯಿಂದಾಗಿ ಟೀ ಉದ್ಯಮವನ್ನು ಆರಂಭಿಸುತ್ತಾರೆ. ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ಪಾರ್ಟ್ ಟೈಮ್ ಕೆಲಸಕ್ಕಾಗಿ ಹೋಟೆಲ್ ಒಂದರಲ್ಲಿ ಸೇರಿದ್ದಾಗ ಪ್ರಾಪುಲ್ ಚಹಾ ಮಾಡುವುದನ್ನು ಚೆನ್ನಾಗಿ ಕಲಿತಿದ್ದರು. ಬಳಿಕ ರಸ್ತೆ ಬದಿಯಲ್ಲಿ ಚಹಾ ಮಾರಾಟ ಮಾಡಲು ಆರಂಭಿಸಿದ್ದ ಪ್ರಪುಲ್ ಮೊದಲ ದಿನ ಕೇವಲ ಒಂದು ಚಹಾ ಮಾರಾಟ ಮಾಡಿದ್ದರು.
ಪ್ರಪುಲ್ ತನ್ನ ಛಲ ಬೀಡದೆ ಮುನ್ನುಗಿದ್ದರು ಬಳಿಕ ತಿಂಗಳಿಗೆ ಸುಮಾರ್ ಹದಿನೈದು ಸಾವಿರ ಲಾಭವನ್ನು ಗಳಿಸುತ್ತಿದ್ದರು ಹಲವಾರು ಸವಾಲುಗಳ ಬಳಿಕ ಇಂದು ಪ್ರಪುಲ್ ವರ್ಷಕ್ಕೆ ಸುಮಾರ್ಯ್ 3 ಕೋಟಿ ರೂಪಾಯಿಯ ವ್ಯವಾಹಾರವನ್ನು ನಡೆಸುತ್ತಿದ್ದಾರೆ. ಸದ್ಯ ಪ್ರಪುಲ್ ಎಂಬಿಎ ಚಾಯ್ ವಾಲಾ ಎಂದು ದೇಶದಲ್ಲಿ ಖ್ಯಾತಿ ಪಡೆದಿದ್ದಾರೆ. ಛಲ ಒಂದಿದ್ದಾರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಪ್ರಪುಲ್ ಅವರು ಉತ್ತಮ ಉದಾಹರಣೆ.
Comments
Post a Comment