ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುವುದನ್ನು ನೀವೂ ನೋಡಿರಬಹುದು. ಅದೆಷ್ಟೋ ಭಾರೀ ನಕಲಿ ಸುದ್ದಿಗಳು ವೈರಲ್ ಆಗುವುದನ್ನು ನಾವೂ ಕಾಣುತ್ತೇವೆ. ಅಂತಹದ್ದೇ ಮತ್ತೊಂದು ವೈರಲ್ ಸುದ್ದಿಯ ಸತ್ಯಸತ್ಯಾತೆ ಫ್ಯಾಕ್ವ್ ಚೆಕ್ ಮೂಲಕ ಬಯಲಾಗಿದೆ.
ಮೂರು ಕಣ್ಣಿನ ಮಗುವೊಂದು ಜರ್ಮನಿಯಲ್ಲಿ ಜನನವಾಗಿದೆ ಇದು ಒಂದು ಪವಾಡ ಎಂದು ಒಕ್ಕಣೆ ಬರೆದು ವಿಡಿಯೋ ಒಂದು ವೈರಲ್ ಆಗಿತ್ತು. ಕಾರಿನಲ್ಲಿ ಮಲಗಿರುವ ವಿಡಿಯೋ ಒಂದರಲ್ಲಿ ಮಗು ಮಲಗಿರುವುದನ್ನು ಕಾಣಬಹುದು ಅದರೆ ಇದರ ಸತ್ಯಾಂಶದ ಬಗ್ಗೆ ಬಹಳಷ್ಟು ಸುದ್ದಿಯಾಗಿತ್ತು ಮಾತ್ರವಲ್ಲದೆ ಈ ಮೂಲಕ ಇದರ ಸತ್ಯಾಸತ್ಯಾತೆಯನ್ನು ಪರೀಕ್ಷಿಸಲು ಖಾಸಗೀ ಸಂಸ್ಥೆ ಮುಂದದಾಗ ಎಲ್ಲಾ ಸತ್ಯಗಳು ಬಯಲಾಗಿವೆ.
ವೈರಲ್ ಆಗಿರುವ ವಿಡಿಯೋ ಫೋಟೋಶಾಪ್ ಬಳಸಿ ಮಗುವಿನ ಎಡಗಣ್ಣನ್ನು ಹಣೆಯ ಮೇಲೆ ಪೋಟೋಶಾಪ್ ಮಾಡಲಾಗಿದೆ. ಇದೊಂದು ನಕಲಿ ವಿಡಿಯೋ ಎಂದು ಬಟಬಯಲಾಗಿದೆ. ಒರೆಯಾಗಿ ಕೆಲವು ಅಸ್ಪಷ್ಟ ಸುದ್ದಿಗಳನ್ನು ಶೇರ್ ಮಾಡುವ ಮುನ್ನ ಒಮ್ಮೆ ಯೋಚಿಸಿ.
Comments
Post a Comment