ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ನ ಮಹಾನಾಯಕನ ಹೆಸರಿನಂತೆ ಬಿಜೆಪಿಯ ಮಹಾನಾಯಕನ ಹೆಸರು ಹೊರಬರಲಿದೆ ಎಂದ ಬಿಜೆಪಿಯ ಪ್ರಭಾವಿ ಶಾಸಕ
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸದ್ಯ ಸುದ್ದಿಯಲ್ಲಿರುವ ವಿಷಯ ಒಂದೇ ಒಂದು ಅದುವೇ ಸಿ.ಡಿ....ಸಿ.ಡಿ....ಸಿ.ಡಿ. ಶಾಸಕರಿಂದ ಆರಂಭವಾಗಿ ಮುಖ್ಯಮಂತ್ರಿಗಳ ತನಕ ಎಲ್ಲಾರ ಬಾಯಲ್ಲೂ ಒಂದೇ ಒಂದು ಸುದ್ದಿ ಅದುವೇ ಸಿಡಿ ಸುದ್ದಿ. ರಾಜಕೀಯ ಎಂಬುದು ಜನರ ಸೇಬೆ ಮಾಡಲು ಇರುವ ಒಂದು ವಿಶಿಷ್ಟ ಮಾರ್ಗ. "ಜನ ಸೇವೆಯೆ ಜನಾರ್ಧನ ಸೇವೆ" ಎಂದು ಕಳಿಸಿಕೊಟ್ಟ ಸಂಸ್ಕೃತಿ ನಮ್ಮದು. ಅದರೆ ಪ್ರಸ್ತುತ ದಿನಮಾನಗಳಲ್ಲಿ ರಾಜಕೀಯ ತನ್ನ ನಿಜ ಬಣ್ಣವನ್ನು ಕಳೆದುಕೊಂಡಿದೆ. ರಾಜಕೀಯ ಲಾಭಕ್ಕಾಗಿ ಯಾವ ಕೀಳು ಮಟ್ಟಕೆ ನಾಯಕರು ಇಳಿಯಬಹುದು ಎಂಬುದಕ್ಕೆ ಕರ್ನಾಟಕವೇ ಉತ್ತಮ ಉದಾಹರಣೆ.
ಜನರು ಬೆಲೆ ಏರಿಕೆ, ನಿರುದ್ಯೋಗ ಹಾಗೂ ಕೊರೋನಾ ಹೊಡೆತದಿಂದ ತತ್ತರಿಸುತ್ತಿದ್ದರೆ ರಾಜಕೀಯ ನಾಯಕರು ಅದ್ಯಾವುದೋ ಸಿಡಿ ವಿಷಯದಲ್ಲಿ ತಲ್ಲಿಣರಾಗಿದ್ದಾರೆ. ವಿರೋಧ ಪಕ್ಷದವರು ಆಡಳಿತ ಪಕ್ಷದ ಮೇಲೆ ಆಡಳಿತ ಪಕ್ಷದವರು ವಿರೋಧ ಪಕ್ಷದವರ ಮೇಲೆ ಆರೋಪ ಪ್ರತ್ಯಾರೋಪಗಳನ್ನು ಮಾಡುವುದರಲ್ಲಿ ನಿರತರಾಗಿರುವ ಸಂಧರ್ಭದಲ್ಲಿ ಬಿಜೆಪಿಯ ಶಾಸಕರೊರ್ವರು ಮತ್ತೊಂದು ಶಾ'ಲಿಂಗ್ ಸುದ್ದಿ ನೀಡುವ ಮೂಲಕ ಜನರು ಆಶ್ಚರ್ಯಪಡುವಂತೆ ಮಾಡಿದ್ದಾರೆ.
ಹೌದು, ಸಿಡಿ ಆರೋಪದ ಹಿಂದೆ ಕಾಂಗ್ರೆಸ್ ನ ಮಹಾನಾಯಕರೊರ್ವರ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಸಂಧರ್ಭದಲ್ಲಿ ಬಿಜೆಪಿಯ ಫೈರ್ ಬ್ರಾಂಡ್ ಶಾಸಕ ಯತ್ನಾಳ್ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಈಗಾಗಲೇ ಕಾಂಗ್ರೆಸ್ ನ ಯುವನಾಯಕನ ಹೆಸರು ಹೊರಬಿದ್ದಿದೆ ಇನ್ನೂ ಕೆಲವು ದಿನಗಳಲ್ಲಿ ಬಿಜೆಪಿಯ ಯುವರಾಜನ ಹೆಸರು ಹೊರಬಿಳಲಿದೆ ಎಂದು ಹೇಳುವ ಮೂಲಕ ಸಿಡಿ ರಹಸ್ಯ ಮತ್ತಷ್ಟು ಆಳವಾಗಿದೆ ಎಂಬ ಸೂಚನೆ ನೀಡಿದ್ದಾರೆ.
Comments
Post a Comment