ಹೈನುಗಾರಿಗೆ ಹಳ್ಳಿ ರೈತರ ಮೂಲ ಕಾಯಕಗಳಲ್ಲಿ ಒಂದು. ದೇಶಕ್ಕೆ ಅನ್ನ ನೀಡುವ ರೈತರ ಬಗ್ಗೆ ಅದೆಷ್ಟು ನಾಯಕರು ಭಾಷಣಗಳನ್ನು ಮಾಡಿದರು ಶ್ರಮಕ್ಕೆ ತಕ್ಕ ಬೆಲೆ ಇಂದಿಗೂ ದೊರೆಯುತ್ತಿಲ್ಲ. ಆನೇಕ ಬಾರಿ ರೈತರು ಇದರ ಬಗ್ಗೆ ಪ್ರತಿಭಟಿಸಿದರು ಅದರಲ್ಲಿ ರಾಜಕೀಯ ಬೆರೆಸಿ, ಪ್ರತಿಭಟನೆಯ ಉದ್ದೇಶವೇ ಮೂಲೆ ಗುಂಪಾಗುತ್ತದೆ. ಕೊರೋನಾ ಕಾಲದಿಂದಾಗಿ ರೈತರ ಬದುಕು ಅದೆಷ್ಟೋ ದುಸ್ತರವಾಗಿದೆ. ಸರಿಯಾದ ಬೆಳೆ ಕೈಗೆ ದೊರೆಯದೆ ರೈತರ ಬದುಕು ದುಸ್ತರವಾಗಿದೆ.
ಮಳೆಯಿಂದಾಗಿ ಕೈಗೆ ಸರಿಯಾದ ಬೆಳೆ ಬಾರದೆ ನೇಗಿಲಯೋಗಿ ಪಡುವ ಕಷ್ಟ ಒಂದು ಕಡೆಯಾದರೆ, ಬಂದ ಅಲ್ಪ ಸ್ವಲ್ಪ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ದೊರೆಯದಿರುವುದು ಮತ್ತೊಂದು ವಿಪರ್ಯಾಸ. ಮೂಲ ಕೃಷಿಯ ಜೊತೆಗೆ ಹೈನುಗಾರಿಕೆ ನಡೆಸುತ್ತಿರುವ ರೈತರಿಗೆ ಗುಡ್ ನ್ಯೂಸ್ ಒಂದನ್ನು ಬೆಂಗಳೂರು ಹಾಲು ಒಕ್ಕೂಟ ನೀಡಿದೆ.
ಬೆಂಗಳೂರು ಹಾಲು ಒಕ್ಕೂಟದ ರೈತರಿಗೆ ಸಿಹಿಸುದ್ದಿಯನ್ನು ನೀಡಿರುವ ಒಕ್ಕೂಟ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ಒಂದು ರೂಪಾಯಿ ಐವತ್ತು ಪೈಸೆ ಹೆಚ್ಚಾಗಲಿದೆ ಎಂದು ಹೇಳಿದೆ. ಈ ದರ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ ಎಂದು ಹಾಲು ಒಕ್ಕೂಟದ ಅಧ್ಯಕ್ಷರು ಹೇಳಿದರು. ಪ್ಯಾಟ್ ಹೆಚ್ಚಾದಂತೆ ಲೀಟರ್ ಗೆ ೨೨ ಪೈಸೆ ಹೆಚ್ಚಾಲಿದೆ ಎಂದು ತಿಳಿಸಿದರು. ಒಟ್ಟಾರೆಯಾಗಿ ಈ ಸುದ್ದಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಬಹುದು ಈ ಸುದ್ದಿಯನ್ನು ಅದಷ್ಟು ಹೆಚ್ಚು ಶೇರ್ ಮಾಡಿ ಎಲ್ಲಾರಿಗೂ ತಲುಪಿಸಿ.
Comments
Post a Comment