ಕನಕಪುರದ ಬಂಡೆ ಎಂದೇ ಖ್ಯಾತಿ ಪಡೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಅಧ್ಯಕ್ಷ ಡಿ ಕೆ ಶಿವಕುಮಾರ್. ಸಾವಿರಾರು ಏಳು-ಬೀಳುಗಳ ನಡುವೆ ಮುನ್ನಲೆಗೆ ಬಂದ ನಾಯಕ. ಆಕ್ರಮ ಆಸ್ತಿ ಗಳಿಕೆಯಿಂದಾಗಿ ಇ.ಡಿ, ಸಿ.ಬಿ.ಐ ಹಾಗೂ ಇನ್ನಿತರ ತನಿಖಾ ಸಂಸ್ಥೆಗಳ ವಿಚಾರಣೆಯನ್ನು ಎದುರಿಸಿರುವ ನಾಯಕ. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿರುವ ಡಿ ಕೆ ಶಿವಕುಮಾರ್ ಭವಿಷ್ಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ನಾಯಕ ಎಂಬುದು ರಾಜಕೀಯ ಪಂಡಿತರ ಮಾತು.
ರಾಜಕೀಯದಲ್ಲಿ ಸವಾಲುಗಳನ್ನು ಎದುರಿಸಿ ಬಂಡೆ ಎಂದು ಹೆಸರುವಾಸಿಯಾಗಿರುವ ಡಿ.ಕೆ ಶಿವಕುಮಾರ್ ಯಾವುದೇ ಸವಾಲುಗಳಿಗೆ ಹೆದರದ ನಾಯಕ. ರಾಜ್ಯದಲ್ಲಿ ಸಮ್ಮೀಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಕುಮಾರ್, ಬಳಿಕ ನಡೆದ ನಾಟಕೀಯ ಬೆಳವಣಿಗೆಗಳಲ್ಲಿ ಸಮ್ಮೀಶ್ರ ಸರ್ಕಾರವನ್ನು ಉರುಳಿಸಲು ಶತ ಪ್ರಯತ್ನ ನಡೆಸಿದರು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಕಾಂಗ್ರೆಸ್ ಡಿ ಕೆ ಅವರನ್ನು ಕಾಂಗ್ರೆಸ್ ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಮುಂದಿನ ದಿನಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಕನಸನ್ನು ಹೊಂದಿರುವ ಶಿವಕುಮಾರ್ ಅವರ ಕನಸು ನನಸಾಗುವ ಎಲ್ಲಾ ಲಕ್ಷಣಗಳು ಕಾಣುತ್ತೀವೆ.
ಬೆಳಗಾವಿ ಲೋಕಸಭಾ ಉಪಚುನಾವಣೆಯ ನಾಮಪತ್ರ ಸಲ್ಲಿಕೆಯ ಸಂಧರ್ಭದಲ್ಲಿ ಭಾಗವಹಿಸಿದ್ದ ಶಿವಕುಮಾರ್ ಹಾಗೂ ಕಾಂಗ್ರೆಸ್ ಆಭ್ಯರ್ಥಿ ಸತೀಶ್ ಜಾರಕಿಹೊಳಿ ಹಲಾಲ ಗ್ರಾಮದ ಸಿದ್ದಸೇನಾ ಮುನಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ನೀವೂ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಲಿದ್ದಿರಿ ಎಂದು ಜೈನ ಮುನಿಗಳು ಆಶೀರ್ವಾದ ಮಾಡಿದರು ಎಂದು ಹೇಳಲಾಗಿದೆ. ಬಳಿಕ ಪ್ರತಿಕ್ರಿಯಿಸಿದ ಡಿ ಕೆ, ನಮಗೆ ಎಲ್ಲಾ ಧರ್ಮಗಳ ಬಗ್ಗೆ ನಂಬಿಕೆ ಇದೆ ಎಂದು ಹೇಳಿದರು.
Comments
Post a Comment