ಉಪಚುನಾವಣೆಯ ಸಂಧರ್ಭದಲ್ಲಿ ರಾಜಕೀಯ ಮೇಲಾಟಗಳು ಜೋರಾಗಿವೆ. ಒಂದು ಪಕ್ಷದ ಮುಖಂಡರು ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗುವುದು ಸರ್ವೇ ಸಾಮಾನ್ಯ. ಈಗ ಜೆಡಿಎಸ್ ಪಕ್ಷದ ಸರದಿ, ಜೆಡಿಎಸ್ ಪಕ್ಷದ ಹಾಗೂ ಲಿಂಗಾಯುತ ಸಮುದಾಯದ ನಾಯಕರೊಬ್ಬರು ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ ಎಂದು ವರದಿಯಾಗಿದೆ.
ಲಿಂಗಾಯುತ ಸಮುದಾಯದ ನಾಯಕ ಆಶೋಕ್ ಪೂಜಾರಿ ಜೆಡಿಎಸ್ ಗೆ ರಾಜೀನಾಮೆ ನೀಡಿರುವ ನಾಯಕ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದಾಗಿ ಘೋಷಿಸಿಕೊಂಡಿದ್ದಾರೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈ ಹೇಳಿಕೆಯನ್ನು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಆಶೋಕ್ ಪೂಜಾರಿಯವರು ಸಿದ್ದರಾಮಯ್ಯ, ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ಹಾಗೂ ಇನ್ನಿತರ ನಾಯಕರ ಆಹ್ವಾನದ ಮೇರೆಗೆ ನಾನು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ. ಬೆಳಗಾವಿಯಲ್ಲಿ ಬದಲಾವಣೆ ಹಾಗೂ ಆಭಿವೃದ್ದಿಯ ಕಾರಣಕ್ಕೆ ನಾನು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದೇನೆ ಎಂದು ಹೇಳಿದರು.
ಆಶೋಕ್ ಪೂಜಾರಿಯವರು ಎಲ್ಲಾ ಪಕ್ಷಗಳಿಗೂ ಸ್ಥಾನಪಲ್ಲಟಗೊಂಡಿದ್ದಾರೆ ಎಂಬುದು ಇಲ್ಲಿ ವಿಶೇಷ. ನಾಲ್ಕು ಬಾರಿ ಚುನಾವಣೆಯಲ್ಲಿ ಸೋಲು ಕಂಡಿರುವ ಆಶೋಕ್ ಅವರು, ರಮೇಶ್ ಜಾರಕೊಹೊಳಿ ವಿರುದ್ದ 75 ಸಾವಿರ ಮತಗಳನ್ನು ಪಡೆದು ಸೋಲು ಕಂಡಿದ್ದರು. ಈ ಬಾರಿ ಉಪಚುನಾವಣೆಗೆ ಜೆಡಿಎಸ್ ಬೆಳಗಾವಿಯಲ್ಲಿ ಸ್ಪರ್ಧಿಸುತ್ತಿಲ್ಲ.
Comments
Post a Comment