ಒಂದು ದೇಶವೆಂದರೆ ಆ ದೇಶದಲ್ಲಿ ವಾಸಿಸುವ ಜನರ ಧ-ರ್ಮವೂ ಪ್ರಧಾನವಾಗಿರುತ್ತದೆ. ವಿಶ್ವದ ಬಹುತೇಕ ರಾಷ್ಟ್ರಗಳು ತಮ್ಮ ರಾಷ್ಟ್ರದ ಧ-ರ್ಮವನ್ನು ಘೋಷಿಸಿಕೊಂಡಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪ್ರಪಂಚದ ಏಕೈಕ ರಾಷ್ಟ್ರವೇ ಭಾರತ. ಭಾರತದಲ್ಲಿ ಎಲ್ಲಾ ಧರ್ಮದವರಿದ್ದರೂ ಭಾರತ ಇಂದಿಗೂ ಸರ್ವಧರ್ಮ ಸಮನ್ವಯ ಎಂಬ ತತ್ವದಲ್ಲಿ ಮುನ್ನಡೆಯುತ್ತಿದೆ. ಭಾರತ ಮೂಲತಃ ಹಿಂ-ದೂ ರಾಷ್ಟ್ರವಾಗಿದ್ದು ಹಾಗೂ ಭಾರತದಲ್ಲಿ ಬಹುಸಂಖ್ಯಾತ ಹಿಂ-ದೂಗಳಿದ್ದರು ಭರತ ಖಂಡ ಎಂದಿಗೂ ಹಿಂ-ದೂ ರಾಷ್ಟ್ರ ಎಂದು ಘೋಷಿಸಿಕೊಂಡಿಲ್ಲ.
ಬಹುಸಂಖ್ಯಾತ ಹಿಂ-ದೂಗಳಿರುವ ಭಾರತದಲ್ಲಿ ಬಿಜೆಪಿ ಹಾಗೂ ಶಿವಸೇನೆ ಎಂಬ ರಾಜಕೀಯ ಪಕ್ಷಗಳು ಹಿಂದೂ ಪರವಾಗಿರುವ ಪಕ್ಷ ಎಂದು ಬಿಂಬಿಸಲಾಗುತ್ತಿದೆ. ಆಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಹಾಗೂ ಇನ್ನಿತರ ಕಾರಣಗಳಿಂದಾಗಿ ಬಿಜೆಪಿಯನ್ನು ಹಿಂ-ದೂ ಪರವಾದ ಪಕ್ಷ ಎಂದು ಬಿಂಬಿಸಲಾಗುತ್ತದೆ. ಬಿಜೆಪಿಯ ಸರ್ವಕಾಲದ ಮಿತ್ರ ಪಕ್ಷ ಶಿವಸೇನೆ ಕಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸೈದಾಂತಿಕ ಹಿನ್ನಲೆಯಲ್ಲಿ ಭಿನ್ನಭಿಪ್ರಾಯವಿರುವ ಎನ್.ಸಿ.ಪಿ ಹಾಗೂ ಕಾಂಗ್ರೆಸ್ ಪಕ್ಷದ ಜೊತೆಗೂಡಿ ಮೈತ್ರಿ ಸರ್ಕಾರವನ್ನು ರಚಿಸಿತ್ತು, ಶಿವಸೇನೆಯ ಈ ನಡೆಗೆ ಭಾರೀ ಟೀಕೆಗೊಳಪಟ್ಟಿತು. ಸೈದಾಂತಿಕ ಹಿನ್ನಲೆಯಲ್ಲಿ ಭಿನ್ನಾಭಿಪ್ರಾಯವಿರುವ ಎನ್.ಸಿ.ಪಿ ಹಾಗೂ ಕಾಂಗ್ರೆಸ್ ಪಕ್ಷದ ಜೊತೆಗೂಡಿ ಸರ್ಕಾರ ನಡೆಸಿರುವುದು ತಪ್ಪು ಎಂಬ ಆಭಿಪ್ರಾಯಗಳು ವ್ಯಕ್ತವಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಆಯೋಧ್ಯೆಗೆ ಭೇಟಿ ನೀಡಿದ್ದ ಶಿವಸೇನೆ ನೇತೃತ್ವ ಸರ್ಕಾರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹಿಂ-ದೂತ್ವದ ಬಗ್ಗೆ ತಮ್ಮ ನಿಲುವನ್ನು ಪ್ರಕಟಿಸಿದ್ದರು.
ಆಯೋಧ್ಯೆಗೆ ತೆರಳಿದ್ದ ಉದ್ದವ್ ಠಾಕ್ರೆ ತಾವೂ ಎನ್.ಸಿ.ಪಿ ಹಾಗೂ ಕಾಂಗ್ರೆಸ್ ಪಕ್ಷದ ಜೊತೆಗೂಡಿ ಸರ್ಕಾರ ರಚಿಸಿದ್ದರು ಎಂದಿಗೂ ಹಿಂ-ದೂತ್ವವನ್ನು ಬಿಟ್ಟುಕೊಟ್ಟಿಲ್ಲ. ಮಹಾರಾಷ್ಟ್ರದ ಜನರ ಏಳಿಗೆಗಾಗಿ ನಾವೂ ಮೈತ್ರಿ ಸರ್ಕಾರ ರಚಿಸಿಕೊಂಡೆವೂ, ಹಿಂದೂತ್ವದ ಪರವಾದ ಧ್ವನಿ ಬಿಜೆಪಿ ಮಾತ್ರವಲ್ಲ ಶಿವಸೇನೆ ಕೂಡ ಎಂದು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಆ ಸಂಧರ್ಭದಲ್ಲಿ ಹೇಳಿದ್ದರು.
Comments
Post a Comment