ಬಿಜೆಪಿಯನ್ನು ಸೋಲಿಸಲು ಮಹಾ-ತಂತ್ರಕ್ಕೆ ಮುಂದಾದ ಮುಖ್ಯಮಂತ್ರಿ: ಎಲ್ಲಾ ಪಕ್ಷಗಳಿಗೆ ಮಹತ್ವದ ಪತ್ರ ರವಾನೆ

ಭಾರತೀಯ ಜನತಾ ಪಾರ್ಟಿ, ಈ ಹೆಸರು ಕೇಳಿದ ತಕ್ಷಣ ನೆನಪಾಗುವ ಹೆಸರುಗಳೆಂದರೆ ಎ.ಬಿ ವಾಜಪೇಯಿ ಹಾಗೂ ಎಲ್.ಕೆ. ಅಡ್ವಾಣಿ. ಅಂದು ಪಕ್ಷಕ್ಕಾಗಿ ದುಡಿದು, ಒಂದಕ್ಕಿ ಸ್ಥಾನದಿಂದ ಇಂದು ದೆಹಲಿಯ ಗದ್ದುಗೆಗೆ ಏರಲು ಶ್ರಮವಹಿಸಿದ ಕಷ್ಟ ಇಂದು ಎಲ್ಲಾರ ಕಣ್ಣ ಮುಂದಿದೆ. ಆ ಇಬ್ಬರೂ ಮಹಾನ್ ನಾಯಕರು ಪಕ್ಷದ ಸಂಘಟನೆಗೆ ಶ್ರಮಿಸಿದರೆ ಇಂದು ಮೋದಿ ಅದೇ ಬಿಜೆಪಿ ಪಕ್ಷವನ್ನು ಆಭಿವೃದ್ದಿ ಪಡಿಸಲು ಉತ್ತಮ ಯೋಜಂಗೆಳನ್ನು ರೂಪಿಸುತ್ತಿದ್ದಾರೆ. ಭಾರತ ದೇಶದ ಪ್ರಧಾನಿಯಾಗಿ ಮೋದಿ ದೇಶದ ಕೀರ್ತಿಯನ್ನು ವಿಶ್ವ ಮಟ್ಟಕ್ಕೆ ಹೆಚ್ಚಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ.

ಮೋದಿ ಅಧಿಕಾರದ ಗದ್ದುಗೆಯನ್ನು ಏರಿದ ಬಳಿಕ ವಿರೋಧ ಪಕ್ಷಗಳಿಗೆ ನೆಲೆ ಇಲ್ಲದಂತಾಗಿದೆ. ಒಂದು ಕಾಲದಲ್ಲಿ ದೇಶವ್ಯಾಪಿ ಜಯಗಳಿಸಿದ್ದ ಕಾಂಗ್ರೆಸ್ ಇಂದು ಅಲ್ಪ ಸ್ಥಾನಗಳನ್ನು ಕಷ್ಟಪಡುತ್ತಿದೆ. ಪ್ರಾದೇಶಿಕ ಪಕ್ಷಗಳು ಮೋದಿಯನ್ನು ಸೋಲಿಸುವಲ್ಲಿ ಈಗಾಗಲೇ ವಿಫಲರಾಗಿದ್ದರೆ.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷವನ್ನು ಸೋಲಿಸುವ ಉದ್ದೇಶದಿಂದ ಮಹಾಘಟಬಂಧಂನ್ ಗೆ ಮುಂದಾದ ವಿಪಕ್ಷಗಳು ಆಂತರಿಕ ಗೊಂದಲಗಳಿಂದಾಗಿ ತಾವೇ ಸೋಲನ್ನು ಅನುಭವಿಸಿದವು. ಈಗ ಸದ್ಯ ಮತ್ತೊಂದು ಮಹಾ ತಂತ್ರಗಾರಿಕೆಗೆ ಮುದಾಗಿರುವ ಪಶ್ಚಿಮ ಬಂಗಾಳದ ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಲ್ಲಾ ವಿಪಕ್ಷಗಳಿಗೆ ಮಹತ್ವದ ಪತ್ರವೊಂದನ್ನು ಬರೆದಿದ್ದಾರೆ. ಮಾತ್ರವಲ್ಲದೆ ಬಿಜೆಪಿಯಮನ್ನು ಸೋಲಿಸಲು ಸಾಂಘಿಕ ಹೋರಾಟದ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಲು ಮತ್ತೊಂದು ಮಹಾಘಟಬಂಧನ್ ರಚಿಸಲಿದೆ ಎಂಬುದು ಸಾಭೀತಾಗಿದೆ.

 

Comments