ಬಿಗ್ ನ್ಯೂಸ್: ಮತ್ತೊಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ! ಕುತೂಹಲ ಮೂಡಿಸಿದ ಆಮಿತ್ ಶಾ ಗೌಪ್ಯ ಸಭೆ

ಅಧಿಕಾರ ಎಂಬುದು ಯಾರಿಗೂ ಶಾಶ್ವತವಲ್ಲ, ಅದರಲ್ಲೂ ರಾಜಕೀಯದ ಅಧಿಕಾರ ಸ್ವಲ್ವವೂ ಶಾಶ್ವತಲ್ಲ ಎಂಬುದು ದಿನಕ್ಕೊಂದು ಘಟನೆಗಳನ್ನು ನೋಡಿದಾಗ ತಿಳಿಯುತ್ತದೆ. ನಮ್ಮ ರಾಜ್ಯ ರಾಜಕೀಯದಲ್ಲಿ ನಡೆದ ರಾಜಕೀಯ ಆಟಗಳು ಮಹಾರಾಷ್ಟ್ರ ರಾಜ್ಯದ ರಾಜಕೀಯದಲ್ಲಿಯೂ ನಡೆದಿತ್ತೂ ಅದರೆ ಅಂತಿಮವಾಗಿ ಎನ್.ಸಿ.ಪಿ, ಕಾಂಗ್ರೆಸ್ ಹಾಗೂ ಶಿವಸೇನೆ ಸೇರಿ ಮೈತ್ರಿ ಸರ್ಕಾರವನ್ನು ರಚಿಸಿತ್ತು. ಆರಂಭದಲ್ಲಿ ಸ್ಪಲ್ಪ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದ ಮಹಾ ಸರ್ಕಾರ, ಕೊರೋನಾದ ಬಳಿಕ ಆಡಳಿತಾತ್ಮಕವಾಗಿ ತತ್ತರಿಸಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಮಹಾರಾಷ್ಟ್ರ ಗೃಹ ಸಚಿವರ ಹಫ್ತಾ ವಸೂಲಿಯ ಸುದ್ದಿ ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸುವ ಹಂತಕ್ಕೆ ತಲುಪಿಸುತ್ತದೆಯೋ ಎಂಬುದು ಭಾರೀ ಚರ್ಚೆಗೆ ಗ್ರಸವಾಗಿದೆ.

ಗೃಹ ಸಚಿವರ ಈ ದಂಧೆಯ ಬಗ್ಗೆ ಅಧಿಕಾರಿಗಳು ಬಹಿರಂಗ ಹೇಳಿ ನೀಡಿದ್ದಾರೆ. ಈ ಘಟನೆಯಿಂದಾಗಿ ಮಹಾ ಸರ್ಕಾರಕ್ಕೆ ರಾಷ್ಟ್ರ ಮಟ್ಟದಲ್ಲಿ ಮುಜುಗರವಾಗಿದೆ. ಮಾತ್ರವಲ್ಲದೆ ಪ್ರಮುಖ ವಿರೋಧ ಪಕ್ಷ ಬಿಜೆಪಿ ತನಿಖೆಗೆ ಬಿಗಿ ಪಟ್ಟು ಹಿಡಿದಿದೆ. ಮಾತ್ರವಲ್ಲದೆ ಮುಜುಗರವನ್ನು ತಪ್ಪಿಸಿಕೊಳ್ಳಲು ಮೈತ್ರಿ ಪಕ್ಷ ಎನ್.ಸಿ.ಪಿ ಕೂದ ತನಿಖೆಗೆ ಆದೇಶಿಸಿದೆ. ಈ ಬಗ್ಗೆ ಗೌಪ್ಯವಾಗಿ ಚರ್ಚಿಸಿರುವ ಅಮಿತ್ ಶಾ ಹಾಗೂ ಶರದ್ ಪವಾರ್ ತನಿಖೆ ಹಾಗೂ ಇನ್ನಿತರ ಎಲ್ಲಾ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ಈ ಘಟನೆಯಿಂದಾಗಿ ಮಹಾ ಸರ್ಕಾರ ಪತನದ ಅಂಚಿಗೆ ತಲುಪಲಿದೆಯೆ ಎಂಬುದನ್ನು ಕಾದು ನೋಡಬೇಕಿದೆ.

Comments