ಜಗನ್ ಮೋಹನ್ ರೆಡ್ಡಿ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಅಂಧ್ರಪ್ರದೇಶ ಜನಪ್ರಿಯ ಮುಖ್ಯಮಂತ್ರಿ. ಹೋ-ರಾಟ ಹಾಗೂ ಪ್ರ-ತಿ-ಭ-ಟನೆಗಳ ಮೂಲಕ ಅಂಧ್ರದ ಜನರ ಮನಸ್ಸಿನಲ್ಲಿ ಮನೆ ಮಾಡಿದ ಜಗನ್ ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಭೂತಪೂರ್ವ ಗೆಲುವು ಸಾಧಿಸುವ ಮೂಲಕ ಚಂದ್ರಬಾಬು ನಾಯ್ಡು ಅವರಿಗೆ ಸೋಲಿನ ರುಚಿ ತೋರಿಸಿದ್ದರು.
ಅಂಧ್ರಪ್ರದೇಶದಲ್ಲಿ ದಕ್ಷ ಹಾಗೂ ಯಶಸ್ವಿ ಆಡಳಿತವನ್ನು ನೀಡುವ ಮೂಲಕ ದೇಶವ್ಯಾಪಿ ಹೆಸರು ಗಳಿಸಿರುವ ಜಗನ್ ಮೋಹನ್ ರೆಡ್ಡಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡುವ ಮೂಲಕ, ತಮ್ಮ ಆಧಿಕಾರ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂಬುದನ್ನು ಸಾಭೀತುಪಡಿಸಿದ್ದಾರೆ. ಹೌದು, ಅಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ತಮ್ಮ ಹಾಗೂ ಪಕ್ಷದ ಜನಪ್ರಿಯತೆ ಎಷ್ಟಿದೆ ಎಂಬುದನ್ನು ಸಾಭೀತುಪಡಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಗಳಲ್ಲಿ ಸುಮಾರು ೭೫ ಸ್ಥಾನಗಳ ಪೈಕಿ ೭೪ ಸ್ಥಾನಗಳನ್ನು ಗೆಲ್ಲುವ ಮೂಲಕ ಕ್ಲಿನ್ ಸ್ವಿಪ್ ಮಾಡಿಕೊಂಡಿದ್ದಾರೆ ಮಾತ್ರಲ್ಲದೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಸಾಧನೆ ಶೂನ್ಯ ಎಂಬುದು ಇಲ್ಲಿ ವಿಶೇಷ.. ೧೨ ಮನ್ಸಿಪಾಲ್ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಒಂದು ಕ್ಷೇತ್ರದ ಮತ ಏಣಿಕೆಯನ್ನು ಹೈಕೋರ್ಟ್ ಆದೇಶದ ಮೇರೆಗೆ ತಡೆಹಿಡಿಯಲಾಗಿದೆ. ಒಟ್ಟಾರೆಯಾಗಿ ಜಗನ್ ಮೋಹನ್ ರೆಡ್ಡಿಯವರ ಆಡಳಿತದ ಪರಿಣಾಮವಾಗಿ ಜನರು ಆಭೂತಪೂರ್ವ ಗೆಲುವನ್ನು ವೈ.ಎಸ್.ಆರ್ ಕಾಂಗ್ರೆಸ್ ಗೆ ನೀಡಿದ್ದಾರೆ.
Comments
Post a Comment