ಕೊರೋನಾ ಎಂಬ ಮಾರಿ ಯಾರನ್ನು ಬಿಟ್ಟಿಲ್ಲ. ಸಾಮಾನ್ಯ ಜನರಿಂದ ಹಿಡಿದು ದೇಶದ ಅತ್ಯುನ್ನತ ಸ್ಥಾನಗಳನ್ನು ಅಲಂಕಾರಿಸಿದವರಿಗೂ ಕೊರೋನಾ ಸೋಂಕು ಶಾಕ್ ಕೊಟ್ಟಿದೆ. ಹೌದು, ಸದ್ಯ ದೇಶದ ಮಾಜಿ ಪ್ರಧಾನಿ, ಕರ್ನಾಟಕದ ಹೆಮ್ಮೆ, ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಷರು ಆಗಿರುವ ಎಚ್. ಡಿ ದೇವೆಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ದೇವೆಗೌಡ ಅವರಿಗೆ ಕೊರೋನಾ ಪಾಸಿಟಿವ್ ಎಂದು ವರದಿಯಾಗಿದೆ.
ಕೊರೋನಾ ಪಾಸಿಟಿವ್ ಧೃಡಪಟ್ಟ ಹಿನ್ನಲೆಯಲ್ಲಿ ಅವರನ್ನು ಮಣಿಪಾಲ್ ಖಾಸಗೀ ಅಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇಬ್ಬರ ಆರೋಗ್ಯವೂ ಸ್ಥಿರವಾಗಿದ್ದು, ದೇವೆಗೌಡ ದಂಪತಿ ಅದಷ್ಟೂ ಬೇಗ ಗುಣಮುಖರಾಗಿ ಬರಲಿ ಎಂಬುದು ಕನ್ನಡಿಗರ ಪ್ರಾರ್ಥನೆ.
Comments
Post a Comment