ದೇಶದಲ್ಲಿ ಚುನಾವಣಾ ಕಾವು ಏರುತ್ತಿರುವ ಬೆನ್ನಲ್ಲೇ ಖಾಸಗಿ ಸಂಸ್ಥೆಗೆಳು ಸಮೀಕ್ಷೆಗಳನ್ನು ನಡೆಸಲು ಆರಂಭಿಸಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಸಮೀಕ್ಷೆಗಳು ಪಕ್ಕಾ ಫಲಿತಾಂಶವನ್ನು ನೀಡಿದ ಬಳಿಕ ಸರ್ವೇ ನಡೆಸುವ ಸಂಸ್ಥೆಗಳು ಹೆಚ್ಚಾಗಿವೆ. ಈ ಮೂಲಕ ಜನರ ನಾಡಿ ಮಿಡಿತವನ್ನು ಆರಿಯಲು ಈ ಸಮೀಕ್ಷೆಗಳು ಸಹಾಕರಿಯಾಗುತ್ತಿವೆ. ದೇಶದ ಅತ್ಯಂತ ಯಶಸ್ವಿ ಸಮೀಕ್ಷಾ ಸಂಸ್ಥೆಗಳಲ್ಲಿ ಒಂದಾದ ಸಿ-ವೋಟರ್ ಸಂಸ್ಥೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಸಮೀಕ್ಷೆಯನ್ನು ನಡೆಸಿದೆ.
ಸಿ-ವೋಟರ್ ಸಮೀಕ್ಷಾ ತಂಡ ನಡೆಸಿರುವ ಸಮೀಕ್ಷೆಯಲ್ಲಿ ಯಾವ ಪಕ್ಷ ಹೆಚ್ಚು ಶೇಕಡವಾರು ಮತಗಳನ್ನು ಪಡೆಯಲಿದೆ ಎಂಬುದರ ಕುರಿತು ಪ್ರಶ್ನೆ ಕೇಳಿದ್ದು ಹಾಗೂ ಇದರ ಫಲಿತಾಂಶವನ್ನು ನೀಡಿದೆ. ಸಿ-ವೋಟರ್ ನಡೆಸಿರುವ ಸಮೀಕ್ಷೆಯಲ್ಲಿ ಬಂದಿರುವ ಫಲಿತಾಂಶ ಈ ರೀತಿ ಇದೆ.
ಸಿ-ವೋಟರ್ ಸಮೀಕ್ಷೆಯ ಪ್ರಕಾರ ಸದ್ಯ ಚುನಾವಣೆ ನಡೆದರೆ ಸುಮಾರು ಶೇ ೪೧ ರಷ್ಟು ಮತವನ್ನು ಬಿಜೆಪಿ ಪಡೆದರೆ, ಅಖಿಲೇಶ್ ಯಾದವ್ ನೇತೃತ್ವದ ಪಕ್ಷ ಸುಮಾರು ಶೇ ೨೪ ರಷ್ಟು ಮತಗಳನ್ನು ಪಡಯಲಿದೆ ಎಂದು ಹೇಳಿದೆ. ಮಾಯಾವತಿ ನೇತೃತ್ವದ ಸಮಾಜವಾದಿ ಪಕ್ಷ ಸುಮಾರು 21 ಶೇ ದಷ್ಟು ಮತಗಳನ್ನು ಪಡೆಯಲಿದೆ ಎಂದು ಹೇಳಿದೆ. ಅದರೆ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ನ ಸಾಧನೆಯಲ್ಲಿ ಯಾವುದೇ ಬದಲಾವಣೆಗಳಾಗದೆ ಕೇವಲ ಶೇ ೬ರಷ್ಟು ಮಾತ್ರ ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.
Comments
Post a Comment