ಐಎಎಸ್ ಅಧಿಕಾರಿ, ಮಾಜಿ ಕಾರ್ಯದರ್ಶಿ ರತ್ನಾಪ್ರಭಾಗೆ ಲೋಕಸಭಾ ಟಿಕೆಟ್.! ಯಾವ ಕ್ಷೇತ್ರದಿಂದ ಗೊತ್ತಾ.?

ದೇಶದಲ್ಲಿ ಚುನಾವಣೆಯ ಪರ್ವಕಾಲ ಆರಂಭವಾಗಿದೆ ಎಂದರೆ ತಪ್ಪಗಲಾರದು. ಪಶ್ಚಿಮ ಬಂಗಾಳ. ಕೇರಳ, ತಮಿಳು ನಾಡು ಹಾಗೂ ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಕಹಳೆ ಜೋರಾಗಿದ್ದಾರೆ, ಕರ್ನಾಟಕ ಹಾಗೂ ಇತರ ಕೆಲವು ರಾಜ್ಯಗಳಲ್ಲಿ ಉಪಚುನಾವಣೆಯ ಸದ್ದು ಜೋರಾಗಿದೆ. ಕರ್ನಾಟಕ ರಾಜ್ಯದಲ್ಲಿ ನಡೆಯಬೇಕಿರುವ ಉಪಚುನಾವಣೆಗೆ ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಆಭ್ಯರ್ಥಿಗಳ  ಆಯ್ಕೆಯನ್ನು ಅಂತಿಮಗೊಳಿಸಿದೆ. ಈ ನಡುವೆ ಕರ್ನಾಟಕ ರಾಜ್ಯದಲ್ಲಿ ಮುಖ್ಯಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಕೆ.ಎಸ್ ರತ್ನಾಪ್ರಭಾ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿಗಳು ಬಹಳ ಸಂಧರ್ಭದಲ್ಲಿ ಓಡಾಡಿದ್ದವು. ಈ ಲೋಕಸಭಾ ಚುನಾವಣೆಯ ಸಂಧರ್ಭದಲ್ಲೂ ಅಂತಹದ್ದೇ ಸುದ್ದಿ ಪ್ರಕಟವಾಗಿತ್ತು ಅದರೆ ಕರ್ನಾಟಕದಿಂದ ಯಾವುದೇ ಟಿಕೆಟ್ ಕೆ.ಎಸ್. ರತ್ನಾಪ್ರಭಾ ಅವರಿಗೆ ನೀಡಲಾಗಿಲ್ಲ.

ಕರ್ನಾಟಕದಲ್ಲಿ ಮುಖ್ಯಕಾರ್ಯದರ್ಶಿಯಾಗಿ ಜನಮನ್ನಣೆಗಳಿಸಿ ತಮ್ಮ ನಿವೃತ್ತಿಯ ಬಳಿಕ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೇರಿದ್ದ ರತ್ನಾಪ್ರಭಾ ಅವರಿಗೆ ಕರ್ನಾಟಕದಿಂದಲೇ ಟಿಕೆಟ್ ಸಿಗಲಿದೆ ಎಂಬ ಮಾತುಗಳು ಹಲವು ಬಾರಿ ಕೇಳಿ ಬಂದಿತ್ತಾದರು ಯಾವುದಕ್ಕೂ ಅಂತಿಮ ಮುದ್ರೆ ಬಿದ್ದಿರಲಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಜನಮನ್ನಣೆಗಳಿಸಿರುವ ರತ್ನಾಪ್ರಭಾ ರಿಗೆ ಅಲ್ಲಿಂದಲೇ ಟಿಕೆಟ್ ನೀಡಲಾಗುತ್ತದೆ ಎಂದು ಸುದ್ದಿಯಾಗಿತ್ತು.

ಬಿಜೆಪಿ ಪಕ್ಷ ಸೇರಿದ ಬಳಿಕ ಸದ್ಯ ರತ್ನಾಪ್ರಭಾ ಅವರಿಗೆ ಗುಡ್ ನ್ಯೂಸ್ ಒಂದು ದೊರಕಿದೆ. ಕೆ.ಎಸ್ ಅವರಿಗೆ ಕೊನೆಗೂ ಟಿಕೆಟ್ ದೊರಕಿದೆ ಅದರೆ ಅದು ಕರ್ನಾಟಕದಿಂದಲ್ಲ ಬದಲಾಗಿ ಪಕ್ಕದ ರಾಜ್ಯ ಅಂಧ್ರಪ್ರದೇಶದಿಂದ. ಧಾರ್ಮಿಕ ಕ್ಷೇತ್ರವಾಗಿ ವಿಶ್ವವಿಖ್ಯಾತಿಯಾಗಿರುವ ತಿರುಪತಿಯಿಂದ ರತ್ನಾಪ್ರಭಾ ಅವರಿಗೆ ಎಸ್.ಸಿ ಮೀಸಲು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವ ಮೂಲಕ ಎಲ್ಲಾ ಸುದ್ದಿಗಳಿಗೂ ತೆರೆಬಿದ್ದಿದೆ. ಮೂಲತಃ ಅಂಧ್ರಪ್ರದೇಶದವರಾಗಿರುವ ರತ್ನಾಪ್ರಭಾ ಅವರು ತಮ್ಮ ತವರು ರಾಜ್ಯದಲ್ಲಿಯೂ ಐ.ಎ.ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಒಟ್ಟಾರೆಯಾಗಿ ಕಾರ್ಯದರ್ಶಿಯಾಗಿ ಜಯಗಳಿಸಿದ್ದ ರತ್ನಾಪ್ರಭಾ ಅವರು ನಾಯಕಿಯಾಗಿ ಜಯಗಳಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

Comments