ಹಲ್ಲು ನೋವಿಗೆ ಇಲ್ಲಿದೆ ಮನೆ ಮದ್ದು: ಕೇವಲ ಮೂರು ಗಂಟೆಗಳಲ್ಲಿ ಹಲ್ಲು ನೋವು ಮಾಯ

 

ಹಲ್ಲು ನೋವು ಪ್ರತಿಯೊಬ್ಬರಿಗೂ ಕಾಡುವ ಸಮಸ್ಯೆ. ಒಮ್ಮೆ ಹಲ್ಲು ನೋವು ಬಂತೆಂದಾರೆ ಜೀವನವೇ ಬೇಡವೆನಿಸುವಷ್ಟು ನೋವಾಗುತ್ತದೆ. ಇಂತಹ ಹಲ್ಲು ನೋವಿಗೆ ನಮ್ಮ ಮನೆಯಲ್ಲಿಯೇ ಬಳಸುವ ಅದೆಷ್ಟೋ ಪದರ್ಧಾಗಳು ಸಹಕಾರಿಯಾಗಲಿದೆ ಎಂಬುದು ಅದೆಷ್ಟೋ ಜನರಿಗೆ ತಿಳಿದಿಲ್ಲ. ಮಾತ್ರವಲ್ಲದೆ ಈ ಮನೆಮದ್ದಿಗೆ ಬೇಕಾಗಿರುವ ಸಾಮಾಗ್ರಿಗಳು ನಾವು ದಿನ ನಿತ್ಯದ ಬಳಕೆಗೆ ಬಳಸುವ ವಸ್ತುಗಳಾಗಿರುತ್ತದೆ.

ಸಾಮಾನ್ಯವಾಗಿ ಹಲ್ಲು ನೋವು ಬರಲು ಪ್ರಮುಖ ಕಾರಣವೆಂದರೆ ನಾವು ಆಹಾರ ಅಥವಾ ಇತರ ವಸ್ತುಗಳನ್ನು ತಿಂದ ನಂತರ ಸರಿಯಾಗಿ ಬಾಯಿಯನ್ನು ಸ್ವಚ್ಚಗೊಳಿಸದಿರುವುದು. ಹಲ್ಲು ನೋವನ್ನು ತಡೆಗಟ್ಟಲು ನಾವು ಮಾಡಬೇಕಾದ ಪ್ರಮುಖ ಕೆಲಸವೆನೆಂದರೆ ಯಾವುದೇ ಆಹಾರವನ್ನು ತಿಂದ ಬಳಿಕ ಬಾಯಿಯನ್ನು ಸರಿಯಾಗಿ ಸ್ವಚ್ಚಗೊಳಿಸುವುದು ಹಾಗೂ ಪ್ರತಿ ರಾತ್ರಿ ಮಲಗುವ ಮುನ್ನ ಉಪ್ಪು ನೀರಿನಲ್ಲಿ ಬಾಯಿಯನ್ನು ಸರಿಯಾಗಿ ಸ್ಸಚ್ಚಗೊಳಿಸುವುದರಿಂದ ಹಲ್ಲು ನೋವನ್ನು ಸುಲಭವಾಗಿ ತಡೆಗಟ್ಟಬಹುದು.

ಮನೆಯಲ್ಲಿ ಅಡುಗೆಗೆ ಬಳಸುವ ಬೆಳ್ಳುಳ್ಳಿಯನ್ನು ಹಲ್ಲು ನೋವಿರುವ ಜಾಗಕ್ಕೆ ಜಜ್ಜಿ ಇಡುವುದರಿಂದ ಹಲ್ಲು ಹುಳುಕು ಕಮ್ಮಿಯಾಗುತ್ತದೆ. ಲವಂಗ ಕೂಡ ಹಲ್ಲು ನೋವಿನ ಸಮಸ್ಯೆಗೆ ರಾಮಬಾಣವಾಗಿದೆ. ಲವಂಗವನ್ನು ಹಲ್ಲು ನೋವಿರುವ ಜಾಗಕ್ಕೆ ಇಡುವುದರಿಂದ ಕೆಲವೇ ಗಂಟೆಗಳಲ್ಲಿ ಹಲ್ಲು ನೋವು ಉಪಶಮನವಾಗುತ್ತದೆ.


Comments